ಸಾಮಾನ್ಯವಾಗಿ ಬ್ರೆಡ್ ಅಂದ್ರೆ ರೋಗಿಗಳು ತಿನ್ನುವಂತದ್ದು ಎಂಬ ಭಾವನೆ ಕೆಲವರಲ್ಲಿದೆ. ಆದ್ರೆ ಬ್ರೆಡ್‍ನಿಂದ ಅನೇಕ ವಿಧವಾದ ಸ್ನ್ಯಾಕ್ಸ್ ತಯಾರಿಸಬಹುದು. ಬ್ರೆಡ್‍ನಿಂದ ಪಿಜ್ಜಾ ಮಾಡಿದ್ರೆ ಹೇಗೆ? ಅದಕ್ಕಾಗಿ ಇಲ್ಲಿದೆ ಬ್ರೆಡ್ ಪಿಜ್ಜಾ ಮಾಡೋ ಸಿಂಪಲ್ ವಿಧಾನ
ಬೇಕಾಗುವ ಸಾಮಾಗ್ರಿಗಳು:
* ಬ್ರೆಡ್- 3 ಸ್ಲೈಸ್
* ಕಟ್ ಮಾಡಿದ ಈರುಳ್ಳಿ- 2 ಚಮಚ
* ಕಟ್ ಮಾಡಿದ ಕ್ಯಾಪ್ಸಿಕಮ್- 2 ಚಮಚ
* ಚೀಸ್- 3 ಚಮಚ
* ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್- 2 ಚಮಚ
* ಕಾಳುಮೆಣಸಿನಪುಡಿ ಅಥವಾ ಇಟಾಲಿಯನ್ ಮಸಾಲೆ- 1 ಚಿಟಿಕೆ
* ಚಿಲ್ಲಿ ಫ್ಲೇಕ್ಸ್- ಸ್ವಲ್ಪ
* ಕ್ಯಾರೆಟ್(ಬೇಕೆಂದಲ್ಲಿ)- 1
* ಕ್ಯಾಬೇಜ್ (ಬೇಕೆಂದಲ್ಲಿ)- 3 ಚಮಚ
Advertisement
ಮಾಡೋ ವಿಧಾನ:
* ಮೊದಲು ಬ್ರೆಡ್‍ನ ಒಂದು ಸೈಡಿಗೆ 1 ಚಮಚದಷ್ಟು ಟೊಮೆಟೋ ಸಾಸ್ ಸವರಿಡಬೇಕು.
* ಅದರ ಮೇಲೆ ಸಣ್ಣಗೆ ಕಟ್ ಮಾಡಿದ ಈರುಳ್ಳಿಯನ್ನು ಹರಡಿ.
* ಈ ಈರುಳ್ಳಿಯ ಮೇಲೆ ಸಣ್ಣಗೆ ತುಂಡರಿಸಿದ ಕ್ಯಾಪ್ಸಿಕಮ್ ಪೀಸ್‍ಗಳನ್ನು ಹಾಕಿ. ಹಾಗೆಯೇ ಪೆಪ್ಪರ್ ಪೌಡರ್ ಮತ್ತು ಚಿಲ್ಲಿ ಫ್ಲೇಕ್ಸ್ ಹರಡಿ.
* ಬಳಿಕ ಚೀಸ್ ಕೂಡ ಅದರ ಮೇಲೆ ಹರಡಿ.
* ಇದರ ಮೇಲೆ ನಿಮಗೆ ಬೇಕೆಂದಲ್ಲಿ ಸಣ್ಣಗೆ ಕಟ್ ಮಾಡಿದ ಟೊಮೆಟೋ, ಕ್ಯಾರೆಟ್, ಕ್ಯಾಬೇಜ್ ಗಳನ್ನು ಬಳಸಬಹುದು.
* ನಂತ್ರ ಒಲೆಯ ಮೇಲೆ ತವಾ ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ತುಪ್ಪ ಸವರಿ ಚೀಸ್ ಕರಗುವವರೆಗೆ ಅಂದ್ರೆ 5-7 ನಿಮಿಷಗಳ ಕಾಲ ಒಲೆಯಲ್ಲಿ ಬಿಸಿ ಮಾಡಿ. ಒಲೆಯಿಂದ ತೆಗೆದ ಬ್ರೆಡ್ ಪಿಜ್ಜಾವನ್ನು ಬಿಸಿಬಿಸಿ ಇರುವಾಗಲೇ ಸವಿಯಿರಿ.