ಹೊಸ ಹೊಸ ಪ್ರಯೋಗಾತ್ಮಕ ಚಿತ್ರಗಳಿಂದ ವಿಶ್ವದಾದ್ಯಂತ ಬೆರಗು ಮೂಡಿಸಿರುವ ಸ್ಯಾಂಡಲ್‌ವುಡ್ ನಿಂದ ಮತ್ತೊಂದು ಹೊಸ ಪ್ರಯೋಗವೇ ಕಾಟೇರ (Katera). 70-80 ರ ದಶಕದ ಕಲ್ಪನೆ. 1973ರಲ್ಲಿ ಬಂದ ಅದೊಂದು ಕಾಯಿದೆಯ ಪರಿಣಾಮಗಳು. ಹಿಂದೇನಾಗಿತ್ತು, ಮುಂದೇನಾಯ್ತು ಅನ್ನೋದ್ರ ಸೂಕ್ಷ್ಮ ಕಥೆಯೇ ಕಾಟೇರ.
ಇದರ ಸೃಷ್ಟಿಕರ್ತರು ತರುಣ್ ಸುಧೀರ್ (Tarun Sudhir). ರಾಕ್‌ಲೈನ್ ವೆಂಕಟೇಶ್ (Rock Line Venkatesh) ಅದ್ಧೂರಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರ. ದರ್ಶನ್ (Darshan) ಅಭಿನಯದ 56ನೇ ಸಿನಿಮಾ ಕೂಡ ಇದಾಗಿದೆ. ದರ್ಶನ್ ಕಾಟೇರನಾಗಿ ಬರುತ್ತಿದ್ದಾರೆ. ಒಂದೇ ಒಂದು ಲುಕ್‌ನಲ್ಲೇ ಮಾಸ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹಿಂದಿನ 55 ಸಿನಿಮಾಗಳಲ್ಲಿ ದರ್ಶನ್ ಕಾಣಿಸ್ಕೊಂಡಿದ್ದೇ ಬೇರೆ. ಇದುವೇ ಬೇರೆ. ಔಟ್ ಆ್ಯಂಡ್ ಔಟ್ ಹಳ್ಳಿ ಬ್ಯಾಕ್‌ಡ್ರಾಪ್.
ಕಂಪ್ಲೀಟ್ ಮಾಸ್ ಎಲಿಮೆಂಟ್ಸ್ ಒಳಗೊಂಡಿರೋ ಕಾಟೇರ ಚಿತ್ರ ಶೇಕಡಾ 90ರಷ್ಟು ಶೂಟಿಂಗ್ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ-ಒಂದಷ್ಟು ಫೈಟ್ ಸೀನ್ ಬಾಕಿ ಇದೆ. ಇದೇ ವರ್ಷ ಸಿನಿಮಾವನ್ನ ತೆರೆಗೆ ತರುವ ಪ್ಲ್ಯಾನ್ ತಂಡದ್ದು. ಇದನ್ನೂ ಓದಿ:Singham 3: ಅಜಯ್ ದೇವಗನ್ ಸಹೋದರಿಯಾಗಿ ನಟಿಸಲಿದ್ದಾರೆ ದೀಪಿಕಾ ಪಡುಕೋಣೆ
40 ವರ್ಷದ ಹಿಂದಿನ ಕಥೆಯಾಗಿರೋದ್ರಿಂದ ಇಡೀ ಚಿತ್ರವನ್ನ ಕನಕಪುರದ ಬಳಿ ದೊಡ್ಡ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಮೈಸೂರು ಹಾಗೂ ಹೈದ್ರಾಬಾದ್‌ನಲ್ಲಿ ಸೆಟ್ ಹಾಕಿ ಆ್ಯಕ್ಷನ್ ಹಾಗೂ ಟಾಕಿ ದೃಶ್ಯಗಳನ್ನ ಸೆರೆ ಹಿಡಿಯಲಾಗಿದೆ. `ರಾಬರ್ಟ್’ ಚಿತ್ರದ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ತರುಣ್ ಸುಧೀರ್-ದರ್ಶನ್ ಕಾಂಬೋ ಸಿನಿಮಾ ಇದಾಗಿರೋದ್ರಿಂದ ನಿರೀಕ್ಷೆಯಂತೂ ದುಪ್ಪಟ್ಟು.
ದರ್ಶನ್ ಜೊತೆ ನಾಯಕಿಯಾಗಿ ಮಾಲಾಶ್ರೀ ಮಗಳು ರಾಧನಾ ರಾಮ್ (Radhana Ram) ಚೊಚ್ಚಲ ಎಂಟ್ರಿ ಚಿತ್ರ ಇದಾಗಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗ್ತಿರೋ ಬಿಗ್ ಬಜೆಟ್ ಚಿತ್ರ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೊಸ ಕಥೆ, ನಯಾ ನೋಟ. ಒಟ್ನಲ್ಲಿ ಸೆಟ್ಟೇರಿದಾಗಿಂದಲೂ ನಿರೀಕ್ಷೆ ಹುಟ್ಟಿಸಿದ `ಕಾಟೇರ’ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸುವ ಹಂತದಲ್ಲಿದೆ. ಸಮಯ ಕೂಡಿ ಬಂದರೆ ಶೀಘ್ರದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]