ಮನುಷ್ಯನ ಪ್ರಾಣವಾಯು ‘ಆಮ್ಲಜನಕ’ (Oxygen). ಇದಿಲ್ಲದಿದ್ದರೆ ಮಾನವನ ಪ್ರಾಣಪಕ್ಷಿ ಕೆಲವೇ ನಿಮಿಷಗಳಲ್ಲಿ ಹಾರಿಹೋಗುತ್ತದೆ. ವಾತಾವರಣದ 1/5% ರಷ್ಟು, ಭೂಪದರದ ತೂಕದಲ್ಲಿ 49% ರಷ್ಟು, ಖನಿಜ ಹಾಗೂ ಶಿಲೆಗಳ ತೂಕದ ಅರ್ಧದಷ್ಟು ಮತ್ತು ಭೂಮಿಯಲ್ಲಿರುವ ನೀರಿನ ತೂಕದ 89% ರಷ್ಟು ಆಮ್ಲಜನಕವಿದೆ. ನಮಗೆ ವಾತಾವರಣದಲ್ಲಿನ ಆಮ್ಲಜನಕ ಎಷ್ಟು ಮುಖ್ಯವೋ, ಜಲಚರಗಳಿಗೆ ನೀರಿನಲ್ಲಿನ ಆಮ್ಲಜನಕ ಅಷ್ಟೇ ಮುಖ್ಯ.
ಕ್ಷೀರಪಥ ಗ್ಯಾಲಕ್ಸಿಯಲ್ಲಿ ಜೀವರಾಶಿ ಹೊಂದಿರುವ ಗ್ರಹವೆಂದರೆ ಅದು ಭೂಮಿ. ಭೂಮಿಯು 71% ನಷ್ಟು ನೀರಿನಿಂದಲೇ ಕೂಡಿದೆ. ಉಳಿದದ್ದು ಭೂಭಾಗವಾಗಿದೆ. ಈ ಭಾಗದಲ್ಲಿ ಮನುಷ್ಯ, ಪ್ರಾಣಿ-ಪಕ್ಷಿ, ಸರಿಸೃಪಗಳು ವಾಸಿಸಿದರೆ, ನೀರಿನಲ್ಲಿ ಕೋಟ್ಯಾನುಕೋಟಿ ಜಲಚರಗಳಿವೆ. ಭೂಮಿಯಲ್ಲಿನ ಬಹುಪಾಲು ಜೀವಿಗಳು ನೀರಿನಲ್ಲೇ ಇವೆ. ಇಷ್ಟು ಪ್ರಮಾಣದ ಜೀವರಾಶಿಗಳಿಗೆ ಈಗ ಕಂಟಕ ಎದುರಾಗಿದೆ. ಜಲಮೂಲಗಳಲ್ಲಿ ಆಮ್ಲಜನಕ ವೇಗವಾಗಿ ಕ್ಷೀಣಿಸುತ್ತಿದೆ. ಇದು ಭೂಮಿಯ ಜೀವಾಧಾರಕ ವ್ಯವಸ್ಥೆಗೆ ದೊಡ್ಡ ಅಪಾಯವಾಗಿದೆ. ಇದನ್ನೂ ಓದಿ: ಬಾಂಗ್ಲಾದ ಮೊಂಗ್ಲಾ ಬಂದರು ನಿರ್ವಹಣೆಯ ಹಕ್ಕು ಪಡೆದ ಭಾರತ – ಏನಿದರ ಮಹತ್ವ?
Advertisement
ಜಲಮೂಲದ ಆಮ್ಲಜನಕಕ್ಕೆ ಇರುವ ಅಪಾಯವೇನು? ಕಾರಣವೇನು? ಇದರಿಂದ ಜಲಚರಗಳಿಗೆ ಎದುರಾಗುವ ತೊಂದರೆಯೇನು? ಹೊಸ ಅಧ್ಯಯನ ಏನು ಹೇಳುತ್ತದೆ? ಎಂಬ ಕುರಿತು ಇಲ್ಲಿದೆ ಮಾಹಿತಿ.
Advertisement
Advertisement
ಕ್ಷೀಣಿಸುತ್ತಿದೆ ಆಮ್ಲಜನಕ!
ವಿಶ್ವದ ಜಲಮೂಲಗಳಲ್ಲಿ ಕರಗಿರುವ ಆಮ್ಲಜನಕವು ವೇಗವಾಗಿ ಕ್ಷೀಣಿಸುತ್ತಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಇದು ಭೂಮಿಯ ಜೀವಾಧಾರಕ ವ್ಯವಸ್ಥೆಗೆ ದೊಡ್ಡ ಅಪಾಯವಾಗಿದೆ. ಇದರಿಂದ ಜಲಚರಗಳಿಗೆ ಮೂಲಭೂತ ಸಮಸ್ಯೆಯಾಗಲಿದೆ ಎಂದು ಸೈನ್ಸ್ ಅಲರ್ಟ್ ವರದಿ ಮಾಡಿದೆ.
Advertisement
ಆಕ್ಸಿಜನ್ ಕ್ಷೀಣಿಸಲು ಕಾರಣವೇನು?
ಮಾನವನ ಅಭಿವೃದ್ಧಿ ಚಿಂತನೆಗಳು ಭೂಮಿ, ಪರಿಸರ ಮತ್ತು ಜೀವರಾಶಿಗಳಿಗೆ ಅಪಾಯವನ್ನು ತಂದೊಡ್ಡಿದೆ. ಜಲಮೂಲದಲ್ಲಿ ಆಮ್ಲಜನಕ ಕ್ಷೀಣಿಸಲು ಹವಾಮಾನ ಬದಲಾವಣೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಮುಖ ಕಾರಣವಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ನ ವಿಜ್ಞಾನಿಗಳ ತಂಡವು ಉಲ್ಲೇಖಿಸಿದೆ. ಇದನ್ನೂ ಓದಿ: Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?
* ಬಿಸಿಯಾಗುತ್ತಿರುವ ನೀರು: ಹೆಚ್ಚಿನ ತಾಪಮಾನವು ನೀರು ಹಿಡಿದಿಟ್ಟುಕೊಳ್ಳುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೆಚ್ಚಿದ ಹಸಿರುಮನೆ ಅನಿಲ ಹೊರಸೂಸುವಿಕೆಯು ಗಾಳಿ ಮತ್ತು ನೀರಿನ ತಾಪಮಾನವನ್ನು ಹೆಚ್ಚಿಸುತ್ತಿದೆ. ಇದು ಆಮ್ಲಜನಕದ ಧಾರಣದಲ್ಲಿ ಇಳಿಕೆಗೆ ಕಾರಣವಾಗುತ್ತದೆ.
* ಜೈವಿಕ ಚಟುವಟಿಕೆ: ಜಲಚರಗಳು ಆಮ್ಲಜನಕವನ್ನು ಮರುಪೂರಣಗೊಳಿಸುವುದಕ್ಕಿಂತ ವೇಗವಾಗಿ ಖಾಲಿ ಮಾಡಬಹುದು. ರಸಗೊಬ್ಬರಗಳು, ಕೊಳಚೆನೀರು ಮತ್ತು ಕೈಗಾರಿಕಾ ತ್ಯಾಜ್ಯದಿಂದ ಹೆಚ್ಚುವರಿ ಪೋಷಕಾಂಶಗಳಿಂದ ಆಗುವ ಪಾಚಿಯ ಹೂವುಗಳು ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಸೇವಿಸುತ್ತದೆ. ಆಮ್ಲಜನಕದ ಮಟ್ಟವು ಗಮನಾರ್ಹವಾಗಿ ಕಡಿಮೆಯಾದಾಗ, ಸೂಕ್ಷ್ಮಜೀವಿಗಳ ಉಸಿರುಗಟ್ಟಿಸುತ್ತದೆ. ಅಲ್ಲಿ ಆಮ್ಲಜನಕದ ಕೊರತೆಯು ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಅಡ್ಡಿಪಡಿಸುತ್ತದೆ.
ಪರಿಣಾಮ ಏನು?
ನೀರಿನ ಪದರಗಳ ನಡುವಿನ ಹೆಚ್ಚಿದ ಸಾಂದ್ರತೆಯ ವ್ಯತ್ಯಾಸಗಳು, ನೀರಿನ ಮೇಲ್ಮೈ ವೇಗವಾಗಿ ಬೆಚ್ಚಗಾಗುವಂತೆ ಮಾಡುತ್ತದೆ. ಇದರಿಂದ ಮಂಜುಗಡ್ಡೆ ಕರಗುತ್ತದೆ. ಆಗ ಲವಣಾಂಶ ಕಡಿಮೆಯಾಗಿ ಆಮ್ಲಜನಕಯುಕ್ತ ನೀರಿನ ಚಲನೆಯನ್ನು ಆಳವಾದ ಪದರಗಳಿಗೆ ದುರ್ಬಲಗೊಳಿಸುತ್ತದೆ. ಜಲವಾಸಿ ಪರಿಸರದ ಆಮ್ಲಜನಕೀಕರಣದ ಮೇಲೆ ಪರಿಣಾಮ ಬೀರುತ್ತದೆ. ಆಮ್ಲಜನಕೀಕರಣದ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಜಲಮೂಲಗಳಲ್ಲಿ ಆಮ್ಲಜನಕ ಕೊರತೆಯು ಜಲಚರಗಳು ಉಸಿರುಗಟ್ಟಿ ಸಾಯಲು ಕಾರಣವಾಗುತ್ತದೆ. ಇದನ್ನೂ ಓದಿ: ಹಾವಿನ ವಿಷವೇ ಈತನಿಗೆ ಆಹಾರ – ʻಸ್ನೇಕ್ ಮ್ಯಾನ್ʼ ಜೀವನ ಕಥೆಯೇ ರೋಚಕ!
ಪ್ಲಾನೆಟರಿ ಬೌಂಡರಿ ಪಟ್ಟಿಗೆ ಸೇರುತ್ತಾ?
ಜಲಮೂಲಗಳಲ್ಲಿ ಆಮ್ಲಜನಕ ಕ್ಷೀಣಿಸುತ್ತಿರುವುದನ್ನು ‘ಪ್ಲಾನೆಟರಿ ಬೌಂಡರೀಸ್’ ಪಟ್ಟಿಗೆ ಸೇರಿಸಲು ಸಂಶೋಧಕರ ತಂಡವು ಬಯಸಿದೆ. ‘ಪ್ಲಾನೆಟರಿ ಬೌಂಡರಿ’ ಅಂದರೆ, ಮಾನವನ ಅಭಿವೃದ್ಧಿ ಚಟುವಟಿಕೆಗಳಿಂದ ಭೂಮಿಯ ವ್ಯವಸ್ಥೆ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಮಿತಿಗಳನ್ನು ವಿವರಿಸುವ ಚೌಕಟ್ಟಾಗಿದೆ.
9 ಪ್ಲಾನೆಟರಿ ಬೌಂಡರಿ ಯಾವುವು?
ಪ್ಲಾನೆಟರಿ ಬೌಂಡರಿ ಪಟ್ಟಿಯಲ್ಲಿ ಹವಾಮಾನ ಬದಲಾವಣೆ, ಸಾಗರ ಆಮ್ಲೀಕರಣ, ವಾಯುಮಂಡಲದ ಓಝೋನ್ ಸವಕಳಿ, ಜಾಗತಿಕ ರಂಜಕ ಮತ್ತು ಸಾರಜನಕ ಚಕ್ರಗಳಲ್ಲಿ ಹಸ್ತಕ್ಷೇಪ, ಜೀವವೈವಿಧ್ಯದ ನಷ್ಟದ ಪ್ರಮಾಣ, ಜಾಗತಿಕ ಸಿಹಿನೀರಿನ ಬಳಕೆ, ಭೂ-ವ್ಯವಸ್ಥೆಯ ಬದಲಾವಣೆ, ಏರೋಸಾಲ್ ಲೋಡಿಂಗ್ ಮತ್ತು ರಾಸಾಯನಿಕ ಮಾಲಿನ್ಯ ಸೇರಿವೆ.