ಈಶಾನ್ಯ, ಉತ್ತರ ಭಾರತದಲ್ಲಿ ಸರಣಿ ಭೂಕಂಪ – ಆತಂಕದಲ್ಲಿ ಜನತೆ

Public TV
1 Min Read
richter scale Earthquake

ನವದೆಹಲಿ: ದೆಹಲಿ-ಎನ್‌ಸಿಆರ್, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಉತ್ತರ ಭಾರತದ (North India) ಹಲವು ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನ ಪ್ರಬಲ ಭೂಕಂಪನದ (Earthquake) ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

ಮಧ್ಯಾಹ್ನ 2:15ರ ವೇಳೆಗೆ ನೇಪಾಳದಲ್ಲಿ 6.5 ತೀವ್ರತೆಯಲ್ಲಿ ಭೂಮಿ ಕಂಪಿಸಿತು. ಇದರ ಪರಿಣಾಮ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ 4.2 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದಕ್ಕೂ ಮುನ್ನ ಹರಿಯಾಣದಲ್ಲಿ 2.7 ತೀವ್ರತೆಯಲ್ಲಿ ಮತ್ತು 3.0 ತೀವ್ರತೆಯಲ್ಲಿ ಅಸ್ಸಾಂನಲ್ಲಿ ಭೂಕಂಪನ ಸಂಭವಿಸಿತು.

earthquake

ಇಂಡೋ, ನೇಪಾಳ, ಚೀನಾ ಗಡಿಯಲ್ಲಿ ಸರಣಿ ಭೂಕಂಪನಗಳು ಸಂಭವಿಸುತ್ತಿದೆ. ಸೋಮವಾರ ರಾತ್ರಿ ಮಯನ್ಮಾರ್‌ನಲ್ಲಿ ಭೂಮಿ ಕಂಪಿಸಿದ್ದು, ಇದರ ಪರಿಣಾಮ ಈಶಾನ್ಯ ಭಾರತದಲ್ಲೂ ಭೂಕಂಪನದ ಅನುಭವವಾಯಿತು. ಜನರು ಪ್ರಬಲ ಭೂಕಂಪನವನ್ನು ಅನುಭವಿಸಿದಾಗ ಕಟ್ಟಡಗಳಿಂದ ಹೊರಗೆ ಧಾವಿಸಿದರು. ಇದನ್ನೂ ಓದಿ: ಬೀದರ್ ಏರ್‌ಬೇಸ್‌ಗೆ ಆಗಮಿಸಿದ ಪ್ರಧಾನಿ ಮೋದಿ

ನೆಲ ಮಹಡಿಯಲ್ಲಿದ್ದ ಜನರಿಗೆ ಭೂಕಂಪನದ ಅನುಭವಗಳು ಆಗಿಲ್ಲ. ಬಹು ಅಂತಸ್ತಿನ ಕಟ್ಟಡಗಳಲ್ಲಿದ್ದ ಜನರಿಗೆ ಭೂಕಂಪನದ ತೀವ್ರತೆ ಅರಿವಾಗಿದ್ದು, ಕಂಪ್ಯೂಟರ್, ಲ್ಯಾಪ್‌ಟಾಪ್, ಮೇಜು, ಕುರ್ಚಿಗಳು ಅಲುಗಾಡುತ್ತಿದ್ದಂತೆ ಕಟ್ಟಡಗಳಿಂದ ಹೊರ ಬಂದಿದ್ದಾರೆ. ಎಕ್ಸ್ ಪೊಸ್ಟ್‌ನಲ್ಲಿ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಆನ್‌ಲೈನ್ ಪೋರ್ಟಲ್ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸ್ ದಾಳಿ

Web Stories

Share This Article