– ಭೂಕಂಪನದ ಕರಾಳ ಅನುಭವ ಬಿಚ್ಚಿಟ್ಟ ಬೆಂಗಳೂರಿನ ದಂಪತಿ
ಬೆಂಗಳೂರು: ಪ್ರಕೃತಿಯ ಮುಂದೆ ಮನುಷ್ಯ ಏನೂ ಇಲ್ಲ ಅನ್ನೋದಕ್ಕೆ ಮ್ಯಾನ್ಮಾರ್ (Myanmar) ಮತ್ತು ಥೈಲ್ಯಾಂಡ್‌ನಲ್ಲಿ (Thailand) ನಡೆದ ಭೂಕಂಪವೇ (Earthquake) ಸಾಕ್ಷಿ. ನೋಡ ನೋಡ್ತಿದ್ದಂತೆ ಭೂಮಿ ಪ್ರಬಲವಾಗಿ ಕಂಪಿಸಿ ಕ್ಷಣಮಾತ್ರದಲ್ಲೇ ಕೋಟ್ಯಂತರ ಜನರಿಗೆ ಇಷ್ಟೇ ಜೀವನ ಅನ್ನೋದನ್ನ ತೋರಿಸಿಬಿಟ್ಟಿತ್ತು. ಇತಂಹ ಘನಘೋರ ಭೂಕಂಪನದಿಂದ ಪಾರಾದ ಕನ್ನಡದ ದಂಪತಿ ತಾಯ್ನಾಡಿಗೆ ಮರಳಿದ್ದಾರೆ.
ಹೌದು, ಹೀಗೆ ಆರಾಮಾಗಿ ಮಗುವಿನೊಂದಿಗೆ ಕಾಲ ಕಳೆಯುತ್ತಿರುವ ದಂಪತಿ ಹೆಸರು ಅಕ್ಷಯ್ ಮತ್ತು ಜಾಗೃತಿ. ಕಳೆದ ವಾರ ತಮ್ಮ 2 ವರ್ಷದ ಮಗನೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದರು. 4 ದಿನ ಥೈಲ್ಯಾಂಡ್‌ನ ವಿವಿಧ ಪ್ರವಾಸಿ ತಾಣಗಳನ್ನ ನೋಡಿ ಎಂಜಾಯ್ ಮಾಡಿ, ಶುಕ್ರವಾರ ಬ್ಯಾಂಕಾಕ್‌ಗೆ (Bangkok) ತಲುಪಿದ್ದರು. ಇನ್ನೂ 3 ದಿನ ಬ್ಯಾಂಕಾಕ್‌ನಲ್ಲೇ ಟೂರ್ ಮಾಡಿ ಬರಬೇಕಿದ್ದ ದಂಪತಿ ಶನಿವಾರವೇ ಬೆಂಗಳೂರಿಗೆ ವಾಪಸಾಗಿದ್ದಾರೆ. ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ
ಶುಕ್ರವಾರ ಮಧ್ಯಾಹ್ನ ಹೋಟೆಲ್‌ನಲ್ಲಿ ಚೆಕ್‌ಇನ್ ಆಗಿ ಮಗನಿಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಭೂಮಿ ಕಂಪಿಸಿದೆ. ತಾವಿದ್ದ ಹೋಟೆಲ್ ಕೂಡ ಕಂಪಿಸಿದೆ. ಮೊದಲು ಏನೋ ಹೋಟೆಲ್‌ನದ್ದೇ ಸಮಸ್ಯೆ ಇರಬೇಕು ಅಂದುಕೊಂಡಿದ್ದೆವು. ಆದರೆ ಯಾವಾಗ ಇನ್ನಷ್ಟು ಕಂಪನ ಜೋರಾದಾಗ ಮೊದಲು ಜೀವ ಉಳಿಸಿಕೊಳ್ಳೋಣ ಎಂದು ಕಂಕುಳಲ್ಲಿ ಮಗುವನ್ನ ಹಾಕಿಕೊಂಡು 10ನೇ ಫ್ಲೋರ್‌ನಿಂದ ಇಳಿದು ಬಂದಿದ್ದೇವೆ ಎಂದು ಜಾಗೃತಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮೆಗಾ ಡೈರಿ ಸ್ಥಾಪನೆಗೆ ಕಿತ್ತಾಟ – ರೈತರಿಂದ ಕೆಎಂಎಫ್ ಅಧ್ಯಕ್ಷರ ತರಾಟೆ
ಇನ್ನೂ ಜಾಗೃತಿ ಅವರ ಪತಿ ಅಕ್ಷಯ್ ಮಾತನಾಡಿ, ಬದುಕುಳಿದರೆ ನಮ್ಮ ದೇಶಕ್ಕೆ ಹೋಗೋಣ ಎಂದು ಪಾಸ್‌ಪೋರ್ಟ್ ತೆಗದುಕೊಂಡು ಮಗು ಪತ್ನಿಯನ್ನ ಕರೆದುಕೊಂಡು ಆ ಹೋಟೆಲ್‌ನಿಂದ ಹೇಗೆ ಕೆಳಕ್ಕೆ ಬಂದೆವು ಎನ್ನುವುದೇ ಗೊತ್ತಾಗಲಿಲ್ಲ. ಭಯ, ರಸ್ತೆ ತುಂಬ ಜನ, ಎಲ್ಲಿ ಏನಾಗ್ತಿದೆ ಅನ್ನೋದೆ ತಿಳಿಯುತ್ತಿಲ್ಲ. ಭೂಮಿ ಕಂಪಿಸಿದ ರೀತಿ, ಹೋಟೆಲ್ ಕೂಡ ಶೇಕ್ ಆಗಿ ಏನು ಮಾಡುವುದು ಎಂದು ತಿಳಿಯದಂತಾಗಿತ್ತು. ದೇವರ ಧಯೆಯಿಂದ ಬದುಕಿ ಬಂದಿದ್ದೇವೆ ಎಂದು ಭೂಕಂಪನ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಾಂಬ್ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್ – ದೈತ್ಯ ಮಿಸೈಲ್ ಸಿದ್ಧಪಡಿಸಿದ ಇರಾನ್
ಒಟ್ಟಿನಲ್ಲಿ ಬ್ಯಾಂಕಾಕ್ ಪ್ರವಾಸಕ್ಕೆ ಹೋದ ಬೆಂಗಳೂರಿನ (Bengaluru) ದಂಪತಿ ಭೂಕಂಪನದ ಅನುಭವವನ್ನ ಏಳೆಏಳೆಯಾಗಿ ಹೇಳಿದ್ದು, ಅಬ್ಬಾ ಹೇಗೋ ಸೇಫ್ ಆಗಿ ಬಂದಿದ್ದೇವೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.