ಕಲಬುರಗಿಯಲ್ಲಿ ಮತ್ತೆ ಕಂಪಿಸಿದ ಭೂಮಿ – ಗ್ರಾಮಸ್ಥರಲ್ಲಿ ಆತಂಕ

Public TV
1 Min Read
earthquake

ಕಲಬುರಗಿ: ಕಲಬುರಗಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಮತ್ತೆ ಲಘು ಭೂಮಿ ಕಂಪನ ಅನುಭವ ಆಗಿದೆ.

ಇಂದು ಮುಂಜಾನ 6 ಗಂಟೆ ಸುಮಾರಿಗೆ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಹಲಚೇರಾ, ಗಡಿಕೇಶ್ವರ್, ರಾಜಾಪುರ ಸೇರಿದಂತೆ ಕೆಲವಡೆ ಲಘು ಭೂ ಕಂಪನ ಸಂಭವಿಸಿದೆ. ಕಳೆದ ಎರಡು ದಿನಗಳಿಂದ ಈ ಗ್ರಾಮಗಳಲ್ಲಿ ಮೇಲಿಂದ ಮೇಲೆ ಲಘು ಭೂ ಕಂಪನ ಉಂಟಾಗುತ್ತಿದ್ದು, ಇದೀಗ ಜನರು ಭಯದಲ್ಲಿಯೇ ಕಾಲ ಕಲಿಯುತ್ತಿದ್ದಾರೆ.

earthquake

ಶನಿವಾರ ಕೂಡ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಹಾಗೂ ಯರಕೊಂಡ ಗ್ರಾಮಗಳಲ್ಲಿ ನಸುಕಿನ ಜಾವ 5.40ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನ ಅನುಭವ ಆಗಿದ್ದು, ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿತ್ತು. ಅಲ್ಲದೇ ಜನರು ಆತಂಕದಿಂದ ಮನೆಯಿಂದ ಹೊರಬಂದಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

earthquake Kalaburagi 1

ಶುಕ್ರವಾರ ಕೂಡಾ ಗ್ರಾಮದಲ್ಲಿ ಲಘು ಭೂ ಕಂಪನವಾಗಿತ್ತು. ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬಾರಿ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಸದ್ದು ಕೇಳಿ ಬರ್ತಿತ್ತು. ಇದೀಗ ಜನರಿಗೆ ಮೇಲಿಂದ ಮೇಲೆ ಲಘು ಭೂಕಂಪನ ಅನುಭವ ಆಗುತ್ತಿದೆ. ಅಲ್ಲದೇ ಈ ವಿಚಾರವಾಗಿ ಕೂಡಲೇ ಸರ್ಕಾರ ನಿಖರ ಮಾಹಿತಿ ತಿಳಿಸಬೇಕು. ಒಂದು ವೇಳೆ ಭೂಕಂಪ ಕೇಂದ್ರ ಸ್ಥಾನ ಆಗಿದ್ದರೆ ಎರಡು ಗ್ರಾಮ ಸ್ಥಳಾಂತರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದರು. ಇದನ್ನೂ ಓದಿ: ಕಲಬುರಗಿಯ ಎರಡು ಗ್ರಾಮಗಳಲ್ಲಿ ಮತ್ತೆ ಭೂಕಂಪನ

Share This Article
Leave a Comment

Leave a Reply

Your email address will not be published. Required fields are marked *