ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ದೆಹಲಿ (NewDelhi) ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನದ (Earthquake) ಅನುಭವವಾಗಿದೆ.
Earthquake of Magnitude:5.4, Occurred on 13-06-2023, 13:33:42 IST, Lat: 33.15 & Long: 75.82, Depth: 6 Km ,Location: Doda, Jammu and Kashmir, India for more information Download the BhooKamp App https://t.co/OyJTMLYeSm@ndmaindia @Dr_Mishra1966 @Indiametdept @KirenRijiju pic.twitter.com/6Ezq3dbyNE
— National Center for Seismology (@NCS_Earthquake) June 13, 2023
Advertisement
ಮಂಗಳವಾರ ಮಧ್ಯಾಹ್ನ 1.30ರ ನಂತರ ಕೆಲ ಸೆಕೆಂಡುಗಳ ಭೂಮಿ ಕಂಪಿಸಿದೆ. ಆದ್ರೆ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಭೂಕಂಪನದ ತೀವ್ರತೆ 5.4 ರಷ್ಟಿದ್ದು, ಜಮ್ಮು ಮತ್ತು ಕಾಶ್ಮೀರದ (Jammu And Kashmir) ದೋಡಾ ಜಿಲ್ಲೆಯಲ್ಲಿ ಭೂಮಿಯ 6 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ ಟ್ವೀಟ್ ಮೂಲಕ ತಿಳಿಸಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ, ದೆಹಲಿಯಲ್ಲಿ ಭೂಕಂಪನ – ಮನೆಯಿಂದ ಹೊರಗಡೆ ಬಂದ ಜನ
Advertisement
Advertisement
ಪ್ರಾಥಮಿಕ ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಗಂಡೋ ಭಾಲೆಸ್ಸಾ ಗ್ರಾಮದ ಬಳಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇದನ್ನೂ ಓದಿ: ದೆಹಲಿ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪ – 9 ಮಂದಿ ಸಾವು