ನವದೆಹಲಿ: ಅಫ್ಘಾನಿಸ್ತಾನದಲ್ಲಿ ಮಂಗಳವಾರ ಸಂಜೆ ಪ್ರಬಲ ಭೂಮಿ ಕಂಪಿಸಿದ ನಂತರ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಲವಾರು ಸೆಕೆಂಡುಗಳ ಕಾಲ ಪ್ರಬಲವಾದ ಕಂಪನ ಉಂಟಾಗಿದೆ.
An earthquake with a magnitude of 6.6 on the Richter Scale hit 133km SSE of Fayzabad, Afghanistan today at 10:17 pm IST: National Centre for Seismology pic.twitter.com/7Wt71qf0rf
— ANI (@ANI) March 21, 2023
Advertisement
ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲಾಗಿದೆ. ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಕಂಪನ ಉಂಟಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್, ರಜೌರಿ ಸೇರಿದಂತೆ ಎಲ್ಲ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ದೇಶದ ರಾಜಧಾನಿ ದೆಹಲಿಯಕಲ್ಲೂ ಭೂಮಿ ಕಂಪಿಸಿದೆ. ಪಂಜಾಬ್, ಚಂಡೀಗಢ, ಉತ್ತರಾಖಂಡದಲ್ಲಿ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
Advertisement
#WATCH | J&K: People in Srinagar rush out of their houses as strong tremors of earthquake felt in several parts of north India. pic.twitter.com/7pXAU0I1WX
— ANI (@ANI) March 21, 2023
Advertisement
ದೆಹಲಿಯಲ್ಲಿ ಸುಮಾರು 136 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಅಫ್ಘಾನಿಸ್ತಾನದ ಫಯಜಾಬಾದ್ ಭೂಕಂಪದ ಕೇಂದ್ರ ಬಿಂದುವಾಗಿದೆ. ಸದ್ಯ ಭೂಕಂಪನದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಜನ ಬೀದಿಗಳಲ್ಲಿ ಜಮಾಯಿಸಿರುವುದನ್ನು ಕಾಣಬಹುದಾಗಿದೆ. ಈ ಬಗ್ಗೆ ಜನ ಕೂಡ ಪ್ರತಿಕ್ರಿಯೆ ನಿಡಿದ್ದು, ಭೂಕಂಪನದಿಂದ ಮನೆಗಳಲ್ಲಿದ್ದ ವಸ್ತುಗಳು ಬಿದ್ದಿರುವುದಾಗಿ ತಿಳಿಸಿದ್ದಾರೆ.
Advertisement
Earthquake with a magnitude of 6.6 at a depth of 156 KM strikes Hindukush Region at 22:17 Hrs IST. Epicentre at 384KM North West of Srinagar. #Earthquake https://t.co/xPv2AhIEvu pic.twitter.com/hBmUvOnk3m
— All India Radio News (@airnewsalerts) March 21, 2023
ವರದಿಗಳ ಪ್ರಕಾರ, ಭಾರತ ಮಾತ್ರವಲ್ಲದೇ ತುರ್ಕಮೆನಿಸ್ತಾನ್, ಕಜಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ, ಅಫ್ಘಾನಿಸ್ತಾನ್ ಮತ್ತು ಕಿರ್ಗಿಸ್ತಾನ್ ಸೇರಿದಂತೆ ಹಲವು ದೇಶಗಳಲ್ಲಿ ಭೂಕಂಪನ ಸಂಭವಿಸಿದೆ ಎಂಬುದು ತಿಳಿದುಬಂದಿದೆ.