ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಕೆಲ ಭಾಗಗಳಲ್ಲಿ ಶನಿವಾರ ತಡರಾತ್ರಿ 11.50ರ ಸುಮಾರಿಗೆ ಭೂ ಕಂಪನದ ಅನುಭವ ಆಗಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯ ಜಮಖಂಡಿ, ಬಾಗಲಕೋಟೆ ವಿದ್ಯಾಗಿರಿಯ 22 ಕ್ರಾಸ್, ಬಾಗಲಕೋಟೆ ತಾಲೂಕಿನ ಶಾರದಾಳ, ಅಂಕಲಗಿ, ಹಿರೇ ಶೆಲ್ಲಿಕೇರಿ ಕ್ರಾಸ್ ನಲ್ಲಿ ಭೂ ಕಂಪನ ಅನುಭವವಾಗಿದೆ. ಭೂಮಿ ಕಂಪನದ ಅನುಭವ ಆಗುದ್ದಂತೆ ಶೆಲ್ಲಿಕೇರಿ ಕ್ರಾಸ್‍ನ ಕೆಲವರು ಮನೆಯಿಂದ ಹೊರ ಬಂದಿದ್ದು, ಈ ವೇಳೆ ದನದ ಕೊಟ್ಟಿಗೆಯಲ್ಲಿದ್ದ ದನಕರುಗಳು ಕೂಡ ಎದ್ದು ನಿಂತಿವೆ. ಇದನ್ನೂ ಓದಿ: ಕೋವಿಡ್‌ಗೂ ಮೊದಲು ಬಂದಿದ್ದ ನಿಫಾ ವೈರಸ್‌ಗೆ ಕೇರಳದಲ್ಲಿ 12ರ ಬಾಲಕ ಬಲಿ
ಈ ಬಗ್ಗೆ ಶೆಲ್ಲಿಕೇರಿ ಕ್ರಾಸ್‍ನ ಬಾಗಲಕೋಟೆ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಸಲೀಮ್ ಶೇಕ್, ರಾತ್ರಿ 11.43ರ ಸುಮಾರಿಗೆ ನಮಗೆ ಭೂ ಕಂಪನದ ಅನುಭವ ಆಗಿದೆ. 10-12 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ರೂಲರ್ ಸಂಚರಿಸುವ ವೇಳೆ ಬರುವ ಶಬ್ದದ ಹಾಗೇ ಶಬ್ದ ಕೇಳಿಸಿದೆ. ನಾವೆಲ್ಲ ಮನೆಯ ಸದಸ್ಯರು ಹೊರಗೆ ಬಂದು ನಿಂತಿದ್ದೇವು. ಮಕ್ಕಳು ಮನೆಮಂದಿ ಭಯಗೊಂಡಿದ್ದರು ಎಂದಿದ್ದಾರೆ. ಅಲ್ಲದೇ ಸಲೀಮ್ ಶೇಖ್ ಅವರ ಮನೆ ಗೋಡೆ ಮೇಲೆ ಚಿಕ್ಕದಾಗಿ ಬಿರುಕು ಕಾಣಿಸಿಕೊಂಡಿದೆ. ಇದನ್ನೂ ಓದಿ: ಮೈಸೂರಿನ ದರೋಡೆ, ಶೂಟ್‍ಔಟ್ ಪ್ರಕರಣ- ಖತರ್ನಾಕ್ ಬಾಂಬೆ ಬುಡ್ಡಾ ಅಂದರ್