ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಭೂಮಿ ನಡುಗಿದ ಅನುಭವ ಆಗಿದೆ. 3-4 ಬಾರಿ ಭೂಮಿಯಲ್ಲಿ ಭಾರೀ ಪ್ರಮಾಣದ ಸದ್ದು ಕೇಳಿ ಬಂದಿದೆ. ಇದನ್ನೂ ಓದಿ: ಗುದನಾಳದಲ್ಲಿ 42 ಲಕ್ಷ ಬೆಲೆ ಬಾಳುವ ಚಿನ್ನದ ಪೇಸ್ಟ್- ವ್ಯಕ್ತಿ ವಶಕ್ಕೆ
Advertisement
ಮಧ್ಯರಾತ್ರಿ ಹಾಗೂ ನಸುಕಿನ ಜಾವ 4.30 ಸುಮಾರಿಗೆ ಪಟ್ಟಣದ ಬಂದಾಳ ರಸ್ತೆ, ಜ್ಯೋತಿ ನಗರ, ಶಾಂತವೀರ ನಗರ ಮತ್ತಿತರ ಕಡೆಗಳಲ್ಲಿ ಜನರಿಗೆ ಭೂಮಿ ನಡುಗಿದ ಅನುಭವವಾಗಿದೆ. ಇದರಿಂದ ಭಯ ಭೀತರಾದ ಜನರು ಮನೆಯಿಂದ ಹೊರಬಂದಿದ್ದಾರೆ. ಇದನ್ನೂ ಓದಿ: ಕೋರಮಂಗಲ ಅಪಘಾತ – 7 ಮಂದಿಯ ಸಾವಿಗೆ ಮದ್ಯ ಪಾರ್ಟಿಯೇ ಕಾರಣ
Advertisement
ಸೆಪ್ಟೆಂಬರ್ 4 ರಂದು ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ 3.9 ತೀವ್ರತೆಯಲ್ಲಿ ಭೂಕಂಪನ ಉಂಟಾಗಿತ್ತು. ಮಹಾರಾಷ್ಟ್ರದ ಕೊಲ್ಲಾಪುರ ಭೂಕಂಪನದ ಕೇಂದ್ರವಾಗಿತ್ತು. ಹೀಗಾಗಿ ಸಿಂದಗಿ ಪಟ್ಟಣದಲ್ಲಿ ಇದು ಭೂಕಂಪನಾ ಎನ್ನುವ ಆತಂಕ ಜನರಲ್ಲಿ ಮನೆ ಮಾಡಿದೆ. ಇದರ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಜನರಿಗೆ ಸತ್ಯ ತಿಳಿಸಿದರೆ, ಆತಂಕ ದೂರವಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Advertisement
Advertisement