ನವದೆಹಲಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಶುಕ್ರವಾರ ಬೆಳಿಗ್ಗೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.
ಭಾರತದ ಈಶಾನ್ಯ ಭಾಗಗಳಾದ ತ್ರಿಪುರಾ, ಮಣಿಪುರ, ಮಿಜೊರಾಂ, ಅಸ್ಸಾಂಮ್ ಸೇರಿದಂತೆ ಕೋಲ್ಕತ್ತಾದ ವರೆಗೂ ಭೂಕಂಪನದ ಅನುಭವವಾಗಿದೆ. ಯುರೋಪಿಯನ್ – ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‍ನ ವೆಬ್ಸೈಟ್(ಇಎಮ್‍ಎಸ್‍ಸಿ)ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಟೊಮೆಟೊ ಬೆಲೆ
Advertisement
An earthquake of magnitude 6.1 occurred today around 5:15 am at 73km SE of Thenzawl, Mizoram:
National Center for Seismology pic.twitter.com/Bz6dQf1SuJ
— ANI (@ANI) November 26, 2021
Advertisement
ಬಾಂಗ್ಲಾದೇಶದ ಚಿತ್ತಗಾಂಗ್ ನಿಂದ ಪೂರ್ವಕ್ಕೆ 183 ಕಿ.ಮೀ ದೂರದ 30 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟ್ರಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್
Advertisement
ಮುಂಜಾನೆ ಸುಮಾರು 5:15 ಗಂಟೆಗೆ ಮೊದಲ ಬಾರಿ ಭೂಮಿ ಕಂಪಿಸಿದರೆ, 5:53 ಕ್ಕೆ ಎರಡನೇ ಬಾರಿ ಕಂಪಿಸಿದೆ. ಭೂಕಂಪದ ಅನುಭವದ ಬಗ್ಗೆ ಮಿಜೋರಾಂನ ಥೆನ್ಜಾವ್ಲ್ ಎಂಬವರು “ನಾನು ಅನುಭವಿಸಿದ ಅತೀ ದೀರ್ಘವಾದ ಭೂಕಂಪಗಳಲ್ಲಿ ಇದು ಒಂದು” ಎಂದು ಟ್ವೀಟ್ ಮಾಡಿದ್ದಾರೆ.