ಕಾಬೂಲ್: ಅಫ್ಘಾನಿಸ್ತಾನದ (Afghanistan) ಕಾಬೂಲ್‍ನಲ್ಲಿ (Kabul) ಬುಧವಾರ ಮುಂಜಾನೆ 4:49ರ ವೇಳೆಗೆ ಭೂಕಂಪನ (Earthquake) ಸಂಭವಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ (Richter Scale) 4.3 ದಾಖಲಾಗಿದೆ.
ಕಾಬೂಲ್‍ನ 85 ಕಿ.ಮೀ ಸುತ್ತಳತೆಯಲ್ಲಿ ಭೂಮಿಯ ಮೇಲ್ಮೈಯಿಂದ ಕೇವಲ 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರ (National Centre for Seismology) ತಿಳಿಸಿದೆ. ಇದನ್ನೂ ಓದಿ: ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ 47ರ ಕಾಲವಲ್ಲ- SDPI ಮುಖಂಡನಿಗೆ ಸಿ.ಟಿ ರವಿ ವಾರ್ನಿಂಗ್
Advertisement
Earthquake of Magnitude:4.3, Occurred on 29-03-2023, 05:49:06 IST, Lat: 34.45 & Long: 70.13, Depth: 10 Km ,Location: 85km E of Kabul , Afghanistan for more information Download the BhooKamp App https://t.co/jCsgyae5RY @Indiametdept @ndmaindia @Dr_Mishra1966 @moesgoi @PMOIndia pic.twitter.com/v5EW6CyrGu
— National Center for Seismology (@NCS_Earthquake) March 29, 2023
Advertisement
ಘಟನೆಯಲ್ಲಿ ಯಾವುದೇ ಸಾವು ನೋವಿನ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ. ಇದೇ ತಿಂಗಳ 21 ರಂದು ಅಘ್ಘಾನಿಸ್ತಾನದಲ್ಲಿ ಭೂಕಂಪನ ಸಂಭವಿಸಿತ್ತು. ಭಾರತದಲ್ಲಿ (India) ದೆಹಲಿ (Delhi) ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭುಕಂಪನದ ಅನುಭವವಾಗಿತ್ತು. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್
Advertisement