ಶ್ರೀನಗರ: ಟರ್ಕಿ ಮತ್ತು ಸಿರಿಯಾದಲ್ಲಿ (Turkey, Syria) ಭಾರೀ ಭೂಕಂಪ ಸಂಭವಿಸಿದ ಬೆನ್ನಲ್ಲೇ ಇದೀಗ ಭಾರತದಲ್ಲೂ ಅಲ್ಲಲ್ಲಿ ಭೂಕಂಪನ (Earthquake) ವರದಿಯಾಗುತ್ತಿದೆ. ಶುಕ್ರವಾರ (ಫೆ.17) ಬೆಳ್ಳಂಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕತ್ರಾದಲ್ಲಿ 3.6 ತೀವ್ರತೆಯ ಭೂಕಂಪನ ಸಂಭವಿಸಿದೆ.
ಮುಂಜಾನೆ 5:10ರ ವೇಳೆಗೆ 10 ಕಿಮೀ ಆಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಇದನ್ನೂ ಓದಿ: ಟರ್ಕಿ, ಸಿರಿಯಾ ಬೆನ್ನಲ್ಲೇ ಭಾರತದಲ್ಲೂ ಭೂಕಂಪನ
Advertisement
Earthquake of Magnitude:3.6, Occurred on 17-02-2023, 05:01:49 IST, Lat: 33.10 & Long: 75.97, Depth: 10 Km ,Location: 97km E of Katra, Jammu and Kashmir, India for more information Download the BhooKamp App https://t.co/dNYT7T7sLG@Indiametdept @ndmaindia @Dr_Mishra1966 @Ravi_MoES pic.twitter.com/s5TTbI8b9L
— National Center for Seismology (@NCS_Earthquake) February 16, 2023
Advertisement
ಸಾಮಾನ್ಯ ಭೂಕಂಪನ ಉಂಟಾಗಿರುವುದರಿಂದ ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ಸಂಭವಿಸಿಲ್ಲ. ಭೂಕಂಪನದ ಕೇಂದ್ರ ಬಿಂದು ಕತ್ರಾದಿಂದ ಪೂರ್ವಕ್ಕೆ 97 ಕಿಮೀ ದೂರದಲ್ಲಿ ಕಂಡುಬಂದಿದೆ. ಭೂಕಂಪದ ಅಕ್ಷಾಂಶ ಮತ್ತು ರೇಖಾಂಶಗಳು ಕ್ರಮವಾಗಿ 33.10 ಡಿಗ್ರಿ ಮತ್ತು 75.97 ಡಿಗ್ರಿಯಲ್ಲಿ ಕಂಡುಬಂದಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
Advertisement
Advertisement
ಫೆಬ್ರವರಿ 13 ರಂದು ಸಿಕ್ಕಿಂ ರಾಜ್ಯದಲ್ಲಿ 4.3 ತೀವ್ರತೆಯ ಭೂಕಂಪನ ಉಂಟಾಗಿತ್ತು. ಇದಕ್ಕೂ ಮುನ್ನಾದಿನ 4.0 ತೀವ್ರತೆಯಲ್ಲಿ ಅಸ್ಸಾಂನಲ್ಲಿ ಹಾಗೂ 3.8 ತೀವ್ರತೆಯಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಭೂಕಂಪನ ಸಂಭವಿಸಿತ್ತು. ಇದನ್ನೂ ಓದಿ:
ಇತ್ತೀಚೆಗೆ ಟರ್ಕಿ, ಸಿರಿಯಾದಲ್ಲಿ ಭಾರೀ ಭೂಕಂಪ ಸಂಭವಿಸಿ ಈಗಾಗಲೇ 40 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲಿ 1939ರಲ್ಲಿ ಸಂಭವಿಸಿದ ಭೂಕಂಪದಲ್ಲಿ 33 ಸಾವಿರ ಮಂದಿ ಮೃತಪಟ್ಟಿದ್ದರು. ಇದು ಈವರೆಗಿನ ದೊಡ್ಡ ಪ್ರಮಾಣದ ಭೂಕಂಪ ಎಂದು ಹೇಳಲಾಗಿತ್ತು. ಆದರೆ 2023ರಲ್ಲಿ ಸಂಭವಿಸಿದ ಭೂಕಂಪ 40 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದ್ದು, ಕರಾಳ ವರ್ಷವನ್ನಾಗಿ ಮಾಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k