ಲೇಹ್: ಲಡಾಖ್‍ನ (Ladakh) ಲೇಹ್‍ನಲ್ಲಿ (Leh) ಇಂದು ಬೆಳಗ್ಗೆ ಭೂಕಂಪವಾಗಿದ್ದು (Earthquake), ರಿಕ್ಟರ್ ಮಾಪಕದಲ್ಲಿ (Richter scale) 4.8 ತೀವ್ರತೆ ದಾಖಲಾಗಿದೆ.
Advertisement
ರಾಷ್ಟ್ರೀಯ ಭೂಕಂಪಶಾಸ್ತ್ರ ಇಲಾಖೆ (National Center for Seismology department) ಭೂಕಂಪದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇಂದು ಬೆಳಗಿನ ಜಾವ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ. ಲೇಹ್‍ನ ಅಲ್ಚಿಯಿಂದ ಉತ್ತರಕ್ಕೆ 189 ಕಿ.ಮೀ ದೂರದಲ್ಲಿ ನೆಲದಿಂದ 10 ಕಿ.ಮೀ ಆಳದಲ್ಲಿ ಬೆಳಗಿನ ಜಾವ 4:19ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಶಸ್ತ್ರಾಸ್ತ್ರಗಳನ್ನು ತ್ಯಜಿಸಿ – ಉಗ್ರರಿಗೆ ಗುಲಾಂ ನಬಿ ಆಜಾದ್ ಮನವಿ
Advertisement
Advertisement
16 ಸೆಪ್ಟೆಂಬರ್ 2022 ರಂದು ಬೆಳಗ್ಗೆ 04:19:41 ಗಂಟೆಗೆ ಭೂಕಂಪ ತೀವ್ರತೆ 4.8, ಲ್ಯಾಟ್: 35.89, ಉದ್ದ: 77.57, ಆಳ: 10 ಕಿ.ಮೀ, ಸ್ಥಳ: ಅಲ್ಚಿ (ಲೇಹ್) ನ 189 ಕಿ.ಮೀ ಉತ್ತರದಲ್ಲಿ ಭೂಕಂಪವಾಗಿದೆ. ಭೂಕಂಪದಿಂದಾಗಿ ಹಾನಿ ಅಥವಾ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: 8 ವರ್ಷದ ಬಳಿಕ ಗೊತ್ತಾಯ್ತು ತನ್ನ ಪತಿ ಅವನಲ್ಲ ಅವಳು – ಗಂಡನ ಲಿಂಗ ಬದಲಾವಣೆ ತಿಳಿದು ಮಹಿಳೆ ಶಾಕ್
Advertisement
#earthquake of Magnitude 4.9 shakes Laddakh region of #India early this morning. #Ladakh #fridaymorning pic.twitter.com/OQr6tQVKvd
— Bhupendra Singh Negi (@BhupendraNegi08) September 16, 2022
ಕಳೆದ ವಾರದ ಆರಂಭದಲ್ಲಿ, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪವು ಜಮ್ಮು ಮತ್ತು ಕಾಶ್ಮೀರದ ಕತ್ರಾದಿಂದ 62 ಕಿ.ಮೀ ಪೂರ್ವ, ಈಶಾನ್ಯಕ್ಕೆ ಸಂಭವಿಸಿತ್ತು. ಆ ಬಳಿಕ ಕೆಲ ದಿನಗಳ ಹಿಂದೆ ಲೇಹ್‍ನ ಅಲ್ಚಿಯಲ್ಲಿ ಲಘು ಭೂಕಂಪನದ ಅನುಭವವಾಗಿತ್ತು. ಅಲ್ಚಿ ಪ್ರದೇಶದ ಮನೆಗಳ ಬಾಗಿಲು, ಕಿಟಕಿಗಳು ಅಲುಗಾಡಲಾರಂಭಿಸಿತ್ತು. ಜನರು ಭಯದಿಂದ ಮನೆಯಿಂದ ಹೊರಬಂದಿದ್ದರು.
Live Tv
[brid partner=56869869 player=32851 video=960834 autoplay=true]