ಚಿಕ್ಕಮಗಳೂರು: ಮಲೆನಾಡು ಚಿಕ್ಕಮಗಳೂರಿನಲ್ಲಿ ಮತ್ತೆ ಭೂಮಿ ಕಂಪಿಸಿದೆ. ಭೂಮಿಯೊಳಗಿಂದ ಬಂದ ಶಬ್ಧದೊಂದಿಗೆ ಭೂಮಿ ಕಂಪಿಸಿದೆ ಅಂತ ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ, ಅಬ್ಬಿಕಲ್ಲು ಗ್ರಾಮದ ನಿವಾಸಿಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಭಾರೀ ಶಬ್ಧದೊಂದಿಗೆ ಜಿಲ್ಲೆಯಲ್ಲಿ ಭೂಮಿ ಕಂಪಿಸುತ್ತಿದ್ದು, ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದಾರೆ. ನಾಲ್ಕು ತಿಂಗಳಿಂದ ಆಗಾಗ್ಗೆ ಇಲ್ಲಿ ಭೂಮಿ ಕಂಪಿಸುತ್ತಿದೆ. ಇಂದು ಕೊಗ್ರೆ ಗ್ರಾಮದಲ್ಲಿ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪನದ ಅನುಭವವಾಗಿದೆ. ಮಧ್ಯ ರಾತ್ರಿ ಕೇಳಿ ಬಂದ ಭಾರೀ ಶಬ್ಧಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದನ್ನೂ ಓದಿ: ಸತತ ಮಳೆಯಿಂದ ಕಂಗೆಟ್ಟ ಮಲೆನಾಡಿನ ಜನತೆಗೆ ಭೂಕಂಪದ ಆತಂಕ!
Advertisement
Advertisement
10 ದಿನದ ಹಿಂದೆಯೂ ದೊಡ್ಡ ಸದ್ದಿನೊಂದಿಗೆ ಭೂಮಿ ಕಂಪಿಸಿತ್ತು. ಭೂಕುಸಿತಕ್ಕೆ ನಾಲ್ಕಕ್ಕೂ ಅಧಿಕ ಮನೆಗಳು ಬಿರುಕು ಬಿಟ್ಟಿತ್ತು. ಹೀಗಾಗಿ ನಿರಂತರ ಭೂಕುಸಿತದಿಂದ ಮಲೆನಾಡಿಗರಲ್ಲಿ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರಿನ ಕೊಗ್ರೆ ಗ್ರಾಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಭೇಟಿ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv