ವಿಜಯಪುರ: ಜಿಲ್ಲೆಯ ತಿಕೋಟಾ(Tikota) ತಾಲೂಕಿನೆಲ್ಲೆಡೆ ಭೂಕಂಪನದ ಅನುಭವವಾಗಿದ್ದು, ಭೂಮಿಯಿಂದ ಕೇಳಿಸಿದ ಜೋರಾದ ಶಬ್ದಕ್ಕೆ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡೋಡಿ ಬಂದಿದ್ದಾರೆ.
ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಮಲಕನದೇರಹಟ್ಟಿ, ಹುಬನೂರ, ಟಕ್ಕಳಕಿ, ಘೋಣಸಗಿ, ಕಳ್ಳಕವಟಗಿ, ಬಾಬಾ ಪ್ರದೇಶದಲ್ಲಿ 2:14ರಿಂದ 2:15 ಸಮಯದಲ್ಲಿ ಭೂಮಿಯಿಂದ ಜೋರಾದ ಶಬ್ದವಾಗಿದೆ. ಇದನ್ನೂ ಓದಿ: ಒಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಎಫೆಕ್ಟ್ – ಬೆಂಗಳೂರಿಗೆ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ
ಕಳೆದ ವರ್ಷ ನಾಲ್ಕೈದು ಬಾರಿ ಭೂಮಿ ಕಂಪಿಸಿದ್ದು, ಈ ವರ್ಷ ಮೊದಲ ಭೂಕಂಪನ ಅನುಭವವಾಗಿದೆ. ಭೂಮಿ ಕಂಪಿಸಿದ್ದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 41 ರೂ. ಇಳಿಕೆ