ರಾಯಚೂರು: ಜಿಲ್ಲೆಯ ಲಿಂಗಸುಗೂರು (Lingasugur) ತಾಲೂಕಿನ ಹಟ್ಟಿ ಚಿನ್ನದ ಗಣಿ (Hutti Gold Mines) ಸುತ್ತಮುತ್ತಲಿನ ಪ್ರದೇಶದಲ್ಲಿ ಲಘು ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯ ಕಂಪನ ದಾಖಲಾಗಿದೆ.
ಅಕ್ಟೋಬರ್ 23 ರಂದು ಬೆಳ್ಳಂಬೆಳಗ್ಗೆ 2:51 ರ ವೇಳೆ ಭೂಮಿ ಕಂಪಿಸಿದೆ ಎಂದು ರಾಜ್ಯ ವಿಪತ್ತು ಮೇಲ್ವಿಚಾರಣಾ ಕೇಂದ್ರ ದೃಢಪಡಿಸಿದೆ. ಹಟ್ಟಿ, ನಿಲೋಗಲ್, ವೀರಾಪುರ, ಗೆಜ್ಜಲಗಟ್ಟಾ ಗ್ರಾಮ ವ್ಯಾಪ್ತಿಯಲ್ಲಿ ಭೂಕಂಪನವಾಗಿದ್ದು, ಈ ಲಘು ಭೂಕಂಪನದಿಂದ ಸದ್ಯ ಯಾವುದೇ ಅಪಾಯವಾಗಿಲ್ಲ. ಗ್ರಾಮಸ್ಥರ ಅನುಭವಕ್ಕೂ ಬಾರದ ಲಘು ಭೂಕಂಪನ (Earthquake) ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಇನ್ನೂ ಭೂಕಂಪದ ಕಾರಣ ಕುರಿತು ತನಿಖೆ ನಡೆದಿದೆ. ಕಲ್ಲುಗಳ ಸ್ಫೋಟದಿಂದಲೂ ಭೂಕಂಪನ ಸಾಧ್ಯತೆಯಿರುತ್ತದೆ. ತನಿಖೆ ಬಳಿಕ ಭೂಕಂಪಿಸಿರುವ ಬಗ್ಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಆಗಮಿಸಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ
ಆಯುಧಪೂಜೆ ದಿನ ಭೂಮಿ ಕಂಪಿಸಿದೆ. ದೇಶದ ಏಕೈಕ ಜೀವಂತ ಚಿನ್ನದ ಗಣಿ ಹಟ್ಟಿಯಲ್ಲಿ ತುಂಬಾ ಆಳದಲ್ಲಿ ಅಂಡರ್ ಗ್ರೌಂಡ್ ಮೈನಿಂಗ್ ನಡೆಯುತ್ತಿರುವುದರಿಂದ ಈ ಭೂಕಂಪನ ಹಟ್ಟಿ ಹಾಗೂ ಸುತ್ತಮುತ್ತಲ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ ಮೆರಗು ನೀಡಲಿವೆ 49 ವಿಶೇಷ ಸ್ತಬ್ಧ ಚಿತ್ರಗಳು – ಯಾವ್ಯಾವ ಜಿಲ್ಲೆಯಿಂದ ಏನೇನು?
Web Stories