ನವದೆಹಲಿ: ಜಪಾನ್‌ನಲ್ಲಿ (Japan) ಸಂಭವಿಸಿದ ಭಾರಿ ಭೂಕಂಪದಿಂದಾಗಿ ಜಗತ್ತು ಬೆಚ್ಚಿಬಿದ್ದಿದೆ. ಇದೇ ಹೊತ್ತಲ್ಲಿ ಭಾರತದ ಪಶ್ಚಿಮ ಬಂಗಾಳ (West Bengal) ಹಾಗೂ ಮಣಿಪುರದಲ್ಲಿ (Manipur) ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಬಾಂಗ್ಲಾ ಮತ್ತು ಮಾಯಾನ್ಮಾರ್ ಗಡಿಯಲ್ಲಿ ಭೂಮಿ ಕಂಪಿಸಿದೆ. 1 ಗಂಟೆ ಅಂತರದಲ್ಲಿ ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲಿ ಭೂಕಂಪನವಾಗಿದೆ. ಪಶ್ಚಿಮ ಬಂಗಾಳದಲ್ಲಿ ರಾತ್ರಿ 10:55 ರ ಸುಮಾರಿಗೆ 3.5 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಉದ್ದ 89.82 ಕಿಮೀ, 5 ಕಿಮೀ ಆಳದಲ್ಲಿ ಕಂಪನವಾಗಿದೆ. ಇದನ್ನೂ ಓದಿ: ತೀಸ್ರಿ ಬಾರ್ ಮೋದಿ ಸರ್ಕಾರ್ – ಚುನಾವಣೆಗೆ ಬಿಜೆಪಿಯಿಂದ ಹೊಸ ಘೋಷ ವಾಕ್ಯ
Advertisement
Advertisement
ಅಂತೆಯೇ ಮಣಿಪುರದಲ್ಲಿ 12 ಗಂಟೆ 1 ನಿಮಿಷಕ್ಕೆ ಭೂಕಂಪನವಾಗಿದೆ. ಮಣಿಪುರದ ಕಾಂಜೊಂಗ್‌ನಲ್ಲಿ ಉದ್ದ 94.31 ಕಿಮೀ, 35 ಕಿಲೋಮೀಟರ್ ಆಳದಲ್ಲಿ 3.0 ತೀವ್ರತೆಯಲ್ಲಿ ಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
Advertisement
Advertisement
ಅಫ್ಘಾನಿಸ್ತಾನದಲ್ಲೂ ಭೂಕಂಪ
ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ಬುಧವಾರ ಎರಡು ತೀವ್ರತೆಯ ಭೂಕಂಪಗಳು ಸಂಭವಿಸಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ. ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆಯ ಭೂಕಂಪವು ಅಫ್ಘಾನಿಸ್ತಾನದಲ್ಲಿ ಸಂಭವಿಸಿದೆ. ಇದನ್ನೂ ಓದಿ: ಅದಾನಿ ಹಿಂಡೆನ್‌ಬರ್ಗ್ ಶಾರ್ಟ್ ಸೆಲ್ಲಿಂಗ್ ಕೇಸ್: ಸುಪ್ರೀಂನಿಂದ ಇಂದು ತೀರ್ಪು ಪ್ರಕಟ