ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
Advertisement
ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ಮತ್ತು ನೇಗಳ್ಳಿ ಗ್ರಾಮ, ಮಡಿಕೇರಿ ತಾಲೂಕಿನ ದೇವಸ್ತೂರು ಹಾಗೂ ಹಾಸನ ಜಿಲ್ಲೆಯ ಗಡಿ ಭಾಗದ ಕೆಲ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನ, ಅರಕಲಗೂಡು, ಹೊಳೆನರಸೀಪುರ ತಾಲೂಕಿನಲ್ಲಿ ಕಂಪಿಸಿದ ಭೂಮಿ – ಜನರಲ್ಲಿ ತೀವ್ರ ಆತಂಕ
Advertisement
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಲುಗಾನಹಳ್ಳಿಯಿಂದ 8 ಕೀ.ಮೀ. ದೂರದಲ್ಲಿ 10 ಅಡಿ ಆಳದಲ್ಲಿ ಇಂದು ಬೆಳಿಗ್ಗೆ 4 ಗಂಟೆ 37 ನಿಮಿಷಕ್ಕೆ ಭೂಮಿ ಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲಾಗಿದೆ. ಇದನ್ನೂ ಓದಿ: ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್ ಮಾಡಿದ ಪತಿಯನ್ನೇ ಥಳಿಸಿದ ಸಾರ್ವಜನಿಕರು… Video Viral
Advertisement
Advertisement
2018, 2019ರಲ್ಲೂ ಇದೇ ರೀತಿ ಮಳೆಗಾಲ ಆರಂಭದಲ್ಲಿ ಕೊಡಗಿನಲ್ಲಿ ಭೂ ಕಂಪಿಸಿದ ಅನುಭವವಾಗಿತ್ತು. ಬಳಿಕ ಜಿಲ್ಲೆಯಲ್ಲಿ ಭೂಕುಸಿತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಧಿಕಾರಿಗಳು ಸಾರ್ವಜನಿಕರು ಯಾವುದೇ ಅತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.