ಬೆಂಗಳೂರು: ಹಾಸನ ಜಿಲ್ಲೆಯ ಹಲವೆಡೆ ಬೆಳಗಿನ ಜಾವ 4:30ರ ಸುಮಾರಿಗೆ 3.4 ತೀವ್ರತೆಯ ಕಂಪನವಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ(ಕೆಸ್‍ಎನ್‍ಡಿಎಂಸಿ) ಅಧಿಕೃತವಾಗಿ ತಿಳಿಸಿದೆ.
ಇಂದು ಬೆಳಗ್ಗೆ ಹಾಸನದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನ ಭಯಭೀತರಾಗಿದ್ದರು. ಹೊಳೇನರಸಿಪುರ, ಅರಕಲಗೂಡು, ಹಾಸನ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿತ್ತು. ಇದನ್ನೂ ಓದಿ: ಹಾಸನ, ಅರಕಲಗೂಡು, ಹೊಳೆನರಸೀಪುರ ತಾಲೂಕಿನಲ್ಲಿ ಕಂಪಿಸಿದ ಭೂಮಿ – ಜನರಲ್ಲಿ ತೀವ್ರ ಆತಂಕ
Advertisement
Advertisement
ಹೇಳಿಕೆಯಲ್ಲಿ ಏನಿದೆ?
ಹೊಳೆನರಸೀಪುರ ತಾಲೂಕಿನ ಮಲುಗನಹಳ್ಳಿ ಗ್ರಾಮ ಕಂಪನದ ಕೇಂದ್ರಬಿಂದು ಆಗಿದ್ದು ಭೂಮಿ ಅಡಿ 0.800 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಮಧ್ಯಮ ಕ್ರಮಾಂಕ ಕಂಪನ ಇದಾಗಿದ್ದು ಕೇಂದ್ರ ಬಿಂದುವಿನ 40-50 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಕಂಪನದ ಅನುಭವವಾಗಿದೆ. ಇದನ್ನೂ ಓದಿ: ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತೆ ಕಾಡಂಚಿನಲ್ಲಿ ಪ್ರತ್ಯಕ್ಷ – ಮದ್ವೆಯಾಗೋದಾಗಿ ನಂಬಿಸಿ ಮೋಸ
Advertisement
ಈ ಭೂಕಂಪನದಿಂದ ಯಾವುದೇ ಹಾನಿಯಾಗುವುದಿಲ್ಲ. ಸೆಸ್ಮಿಕ್ ವಲಯ 2ರಲ್ಲಿ ಈ ಜಾಗ ಬರುವುದರಿಂದ ಹಾನಿಯ ಸಾಧ್ಯತೆ ಕಡಿಮೆ. ಜನತೆ ಭಯಪಡುವ ಅಗತ್ಯವಿಲ್ಲ ಎಂದು ಕೆಎಸ್‍ಎನ್‍ಡಿಎಂಸಿ ತಿಳಿಸಿದೆ.
Advertisement
ಭೂಮಿ ಕಂಪನವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನೆಯಿಂದ ಜೀವ ಭಯದಲ್ಲಿ ಹೊರಬಂದಿದ್ದಾರೆ. ಸುಮಾರು 6 ಸೆಕೆಂಡ್ ಭೂಮಿ ಕಂಪಿಸಿದ ಅನುಭವವಾಗಿ, ಮಲಗಿದ್ದವರು ಮಕ್ಕಳೊಂದಿಗೆ ಹೊರಬಂದು ರಸ್ತೆಯಲ್ಲಿ ನಿಂತಿದ್ದಾರೆ.
ಹೊಳೇನರಸಿಪುರ ತಾಲೂಕಿನ ಬೆಟ್ಟದ ಸಾತನಹಳ್ಳಿ, ಹಳ್ಳಿ ಮೈಸೂರು, ಕಲ್ಲಹಳ್ಳಿ, ದಾಳಗೌಡನಹಳ್ಳಿ, ದೊಡ್ಡ ಕಾಡನೂರು, ಪೂಜೆ ಕೊಪ್ಪಲು, ಮಾಕವಳ್ಳಿ, ತೇಜೂರು, ಗೋಹಳ್ಳಿ, ಕುರಿ ಕಾವಲು, ಓಡನಹಳ್ಳಿ, ನಿಡುವಣಿ, ಅರಕಲಗೂಡು ತಾಲೂಕಿನ ಬೆಳವಾಡಿ, ಹೊಳೆನರಸೀಪುರ ಪಟ್ಟಣದ ಚಿಟ್ಟನಹಳ್ಳಿ ಬಡಾವಣೆ, ನರಸಿಂಹನಾಯಕ ನಗರ ನಗರ, ಹೌಸಿಂಗ್ ಬೋರ್ಡ್, ಸೇರಿದಂತೆ ತಾಲೂಕಿನ ಹಲವೆಡೆ ಭೂಮಿ ಕಂಪನವಾಗಿದೆ.
ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಪಾತ್ರೆಗಳು ಹಾಗೂ ಮನೆಯ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಕೆಲವು ವಸ್ತುಗಳು ಕಂಪನದ ಹಿನ್ನೆಲೆಯಲ್ಲಿ ಒಡೆದು ಹೋಗಿದೆ.