ಮಂಡ್ಯ: ಮಂಗಳವಾರ ಸಂಭವಿಸಿದ ಲಘು ಭೂಕಂಪನದಿಂದ ಶಿಥಿಲಗೊಂಡಿದ್ದ ಮನೆಯ ಮೇಲಿದ್ದ ನೀರಿನ ಟ್ಯಾಂಕ್‍ನ ಗೋಡೆ ಕುಸಿದು ಮತ್ತೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಹೊಸರು ಗ್ರಾಮದಲ್ಲಿ ಗೋಡೆ ಕುಸಿತಗೊಂಡಿದೆ.
Advertisement
ನಂದೀಶ್ ಎಂಬುವವರ ಮನೆಯ ಮೇಲಿದ್ದ ಪ್ಲಾಸ್ಟಿಕ್ ನೀರಿನ ಟ್ಯಾಂಕ್ ನಿನ್ನೆ ಸಂಭವಿಸಿದ ಭೂಕಂಪನದಿಂದ ಶಿಥಿಲವಾಗಿತ್ತು. ಇಂದು ಆ ಟ್ಯಾಂಕ್ ಕುಸಿದು ಬಿದ್ದಿದೆ. ಟ್ಯಾಂಕ್ ರಕ್ಷಣೆಗೆ ಕಟ್ಟಲಾಗಿದ್ದ ಸಿಮೆಂಟ್ ಗೋಡೆ ಮೇಲಿನಿಂದ ಕೆಳಗಿದ್ದ ಹೆಂಚಿನ ಮನೆಯ ಮೇಲೆ ಬಿದ್ದಿದೆ. ಪರಿಣಾಮ ಈರಯ್ಯ ಎಂಬುವವರ ಮನೆಯ ಹೆಂಚುಗಳನ್ನ ಛಿದ್ರಗೊಳಿಸಿ ಒಳನುಗ್ಗಿದ ಸಿಮೆಂಟ್ ಗೋಡೆ ಮನೆಯೊಳಗಿದ್ದ ಜಯಮ್ಮ ಅವರಿಗೆ ತಾಗಿದೆ. ಇದರಿಂದ ಜಯಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Advertisement
Advertisement
ಹೆಂಚಿನ ಮೇಲೆ ಸಿಮೆಂಟ್ ಗೋಡೆ ಬಿದ್ದ ಶಬ್ದ ಕೇಳಿ ಜಯಮ್ಮ ಪಕ್ಕಕ್ಕೆ ಸರಿದಿದ್ದರಿಂದ ಭಾರೀ ಅನಾಹುತ ತಪ್ಪಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಾರೆ ನೀರಿನ ಟ್ಯಾಂಕ್ ಕುಸಿದ ಪರಿಣಾಮ ಮನೆ, ಸೋಲಾರ್ ವಾಟರ್ ಹೀಟರ್ ಸೇರಿದಂತೆ ಹಲವು ವಸ್ತುಗಳು ಜಖಂಗೊಂಡಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.
Advertisement