ಮಂಡ್ಯ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಮಿ ಕ್ಷಣಕಾಲ ಕಂಪಿಸಿದ ಅನುಭವವಾಗಿದ್ದು, ಗಾಬರಿಗೊಂಡ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಗುರುವಾರ ಮಧ್ಯಾಹ್ನ ನಗರದ ಕೆಲವು ಭಾಗಗಳಲ್ಲಿ ಮಧ್ಯಾಹ್ನ ಸುಮಾರು 3.42ರ ವೇಳೆ ಜಿಲ್ಲೆಯಲ್ಲಿ ಭಾರೀ ಶಬ್ದವೊಂದು ಕೇಳಿ ಬಂದಿತ್ತು. ದೊಡ್ಡದಾದ ಶಬ್ದ ಕೇಳಿ ಗಾಬರಿಗೊಂಡ ಜನ ಮನೆಯಿಂದ ಹೊರಗೆ ಬಂದು ಅಕ್ಕ-ಪಕ್ಕದ ಮನೆಯವರ ಬಳಿ ಆತಂಕದಿಂದ ಏನಾಗುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಸುಮಾರು 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವಾಗುತ್ತಿದೆ ಎಂದು ಹೇಳಲಾಗುತ್ತಿದೆ.
Advertisement
Advertisement
ಇದಲ್ಲದೇ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ಪಾಂಡವಪುರ ತಾಲೂಕುಗಳಲ್ಲಿಯೂ ಕ್ಷಣಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಕೆಲವು ದಿನಗಳ ಹಿಂದೆಯೂ ಕೆಆರ್‍ಎಸ್ ವ್ಯಾಪ್ತಿಯಲ್ಲಿಯೂ ಭಾರೀ ಶಬ್ದ ಕೇಳಿಬಂದಿತ್ತು. ಅಲ್ಲದೇ ಭೂಮಿ ಕಂಪಿಸಿದ ಅನುಭವವು ವ್ಯಕ್ತವಾಗಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv