ಭೂಮಿಗೆ (Earth) ಏಕೈಕ ನೈಸರ್ಗಿಕ ಉಪಗ್ರಹ ಚಂದ್ರ (Moon) ಎಂದು ನಾವೆಲ್ಲ ಓದಿದ್ದೇವೆ. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಭೂಮಿ ಮತ್ತೊಂದು ಚಂದ್ರನನ್ನು ಪಡೆಯಲಿದೆ!
ಭೂಮಿ ಮಿನಿ-ಮೂನ್’ನ್ನು (2024 PT5) ಪಡೆಯಲಿದ್ದು, ಇದು ಈ ತಿಂಗಳ ಅಂತ್ಯದಿಂದ ಸುಮಾರು ಎರಡು ತಿಂಗಳ ಕಾಲ ಚಂದ್ರನಂತೆಯೇ ಭೂಮಿಯ ಸುತ್ತ ಸುತ್ತಲಿದೆ. ಅಮೆರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿ ಪ್ರಕಟಿಸಿದ ವರದಿ ಪ್ರಕಾರ, ಈ ಕ್ಷುದ್ರಗ್ರಹವನ್ನು ನವೆಂಬರ್‌ವರೆಗೆ ಭೂಮಿಯ ಗುರುತ್ವಾಕರ್ಷಣೆ ತಾತ್ಕಾಲಿಕವಾಗಿ ಹಿಡಿದಿಡಲಿದೆ ಎಂದು ಉಲ್ಲೇಖಿಸಲಾಗಿದೆ.
Advertisement
Advertisement
ಆಗಸ್ಟ್ 7 ರಂದು ಈ ಕ್ಷುದ್ರಗ್ರಹವನ್ನು ನಾಸಾದ ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ (ATLAS) ನಿಂದ ಇದನ್ನು ಪತ್ತೆ ಮಾಡಲಾಗಿತ್ತು. ಇದು ಭೂಮಿಯ ಗುರುತ್ವಾಕರ್ಷಣೆಯಿಂದ ಮುಕ್ತವಾಗುವ ಮೊದಲು ಸೆಪ್ಟೆಂಬರ್ 29 ರಿಂದ ನವೆಂಬರ್ 25 ರವರೆಗೆ ಭೂಮಿಯನ್ನು ಸುತ್ತುತ್ತದೆ ಎಂದು ಹೇಳಲಾಗಿದೆ.
Advertisement
ನಾಸಾದ ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ ಭೂಮಿಯ ಸಮೀಪದ ಆಕಾಶ ಕಾಯಗಳ ಬಗ್ಗೆ ಪ್ರತಿ 24 ಗಂಟೆಗಳಿಗೊಮ್ಮೆ ವರದಿ ಮಾಡುತ್ತದೆ.
Advertisement
ಅರ್ಜುನ ಕ್ಷುದ್ರಗ್ರಹ ಪಟ್ಟಿ ಎಂದರೇನು?
‘ಅರ್ಜುನ’ ಎನ್ನುವುದು ಸೌರವ್ಯೂಹದಲ್ಲಿನ ಕ್ಷುದ್ರಗ್ರಹಗಳ ಗುಂಪಾಗಿದೆ. ಇದು ಸೂರ್ಯನನ್ನು ಸುತ್ತುವ ಬಾಹ್ಯಾಕಾಶ ಶಿಲೆಗಳನ್ನು ಒಳಗೊಂಡಿದೆ. 2024 PT5 ಬಹುಶಃ ಅರ್ಜುನ ಕ್ಷುದ್ರಗ್ರಹ ಪಟ್ಟಿಯಿಂದ ಹುಟ್ಟಿಕೊಂಡಿದೆ.
ಖಗೋಳಶಾಸ್ತ್ರಜ್ಞ ರಾಬರ್ಟ್ ಹೆಚ್.ಮೆಕ್‌ನಾಟ್ 1991ರ ನವೆಂಬರ್ 1 ರಂದು ಆಸ್ಟ್ರೇಲಿಯಾದ ಸೈಡಿಂಗ್ ಸ್ಪ್ರಿಂಗ್ ವೀಕ್ಷಣಾಲಯದಲ್ಲಿ ‘1991 VG’ ಎಂಬ ಕ್ಷುದ್ರಗ್ರಹ ಕಂಡುಹಿಡಿದಾಗ ಈ ‘ಅರ್ಜುನʼ ಗುಂಪನ್ನು ಕೂಡ ಕಂಡುಹಿಡಿದರು. ಆ ಸಮಯದಲ್ಲಿ ಮಹಾಭಾರತದಲ್ಲಿನ ಅರ್ಜುನನ ಪಾತ್ರದಿಂದ ಸ್ಫೂರ್ತಿ ಪಡೆದು ‘ಅರ್ಜುನ’ ಎಂಬ ಹೆಸರನ್ನು ಇಡಲಾಯಿತು. ಅರ್ಜುನನ ಭಾಣದ ವೇಗದಂತೆ ಸೌರವ್ಯೂಹದಲ್ಲಿನ ಈ ಕ್ಷುದ್ರಗ್ರಹಗಳು ಚಲಿಸುವುದರಿಂದ ಈ ಗುಂಪಿಗೆ ಅರ್ಜುನ ಎಂಬ ಹೆಸರನ್ನು ಇಡಲಾಗಿದೆ.
ಮಿನಿ -ಮೂನ್‌ನಲ್ಲಿ ಎಷ್ಟು ವಿಧಗಳಿವೆ?
ಮಿನಿ-ಮೂನ್ (Mini-Moon) ಪ್ರಕ್ರಿಯೆಯನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಮೊದಲನೆಯದಾಗಿ ದೀರ್ಘ ಅವಧಿಯದ್ದು, ಇದು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಭೂಮಿಯನ್ನು ಸುತ್ತಲಿದೆ. ಎರಡನೇಯದು ಅಲ್ಪ ಅವಧಿಯದ್ದು, ಕೆಲವೇ ದಿನಗಳು, ವಾರಗಳು ಅಥವಾ ತಿಂಗಳುಗಳು ಕಾಣಿಸಿಕೊಳ್ಳುಂತಹದ್ದು. ದೀರ್ಘ ಅವಧಿಯ ಮಿನಿ ಮೂನ್ ಅಪರೂಪವಾಗಿದ್ದರೂ, ಪ್ರತಿ 10-20 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಈಗ ಕಾಣಿಸಿಕೊಳ್ಳುವ 2024 PT5 ಅಲ್ಪ ಅವಧಿಯ ಮಿನಿಮೂನ್ ಆಗಿದೆ.
ದುರದೃಷ್ಟವಶಾತ್, 2024 PT5 ಹವ್ಯಾಸಿ ದೂರದರ್ಶಕಗಳು ಅಥವಾ ದುರ್ಬೀನುಗಳಿಂದ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ವೃತ್ತಿಪರ ಖಗೋಳಶಾಸ್ತ್ರಜ್ಞರು ಬಳಸುವ ದೊಡ್ಡ ದೂರದರ್ಶಕಗಳು ಮತ್ತು ವಿಶೇಷ ಸಾಧನಗಳನ್ನು ಬಳಸಿಕೊಂಡು ಮಿನಿ-ಮೂನ್‌ನ್ನು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ವೀಕ್ಷಿಸಲು ಕನಿಷ್ಠ 30 ಇಂಚುಗಳಷ್ಟು ವ್ಯಾಸವನ್ನು ಹೊಂದಿರುವ ದೂರದರ್ಶಕ ಮತ್ತು CCD ಅಥವಾ CMOS ಡಿಟೆಕ್ಟರ್, 30-ಇಂಚಿನ ದೂರದರ್ಶಕ ಅಗತ್ಯವಿದೆ ಎನ್ನುತ್ತಾರೆ ತಜ್ಞರು.
2024 PT5 ಕೇವಲ 10 ಮೀಟರ್ (33 ಅಡಿ) ವ್ಯಾಸ ಹೊಂದಿದ್ದು, ಚಿಕ್ಕದಾಗಿದೆ. ಇದು ಉಳಿದ ಅರ್ಜುನ ಕ್ಷುದ್ರಗ್ರಹ ಪಟ್ಟಿಯ ಕ್ಷುದ್ರಗ್ರಹಗಳಂತೆಯೇ ಕಕ್ಷೆಯ ಗುಣಲಕ್ಷಣಗಳನ್ನು ಹೊಂದಿದೆ. ಇದು ಭೂಮಿಯಂತೆಯೇ ಸೂರ್ಯನ ಸುತ್ತ ಕಕ್ಷೆಯನ್ನು ಸುತ್ತುತ್ತದೆ.
ಈ ಹಿಂದೆಯೂ ‘ಮಿನಿ-ಮೂನ್’ನ್ನು ಭೂಮಿ ನೋಡಿದೆಯೇ?
ಹೌದು, ಈ ಹಿಂದೆ ಭೂಮಿ ಮಿನಿ ಮೂನ್‌ಗಳನ್ನು ನೋಡಿದೆ. 2006 ರ ಜುಲೈನಲ್ಲಿ ಕ್ಷುದ್ರಗ್ರಹವು ಭೂಮಿಯ ಗುರುತ್ವಾಕರ್ಷಣೆಯಿಂದ ಸೆರೆಹಿಡಿಯಲ್ಪಟ್ಟಿತು ಮತ್ತು ಜುಲೈ 2007 ರವರೆಗೆ ಒಂದು ವರ್ಷದವರೆಗೆ ನಮ್ಮ ಗ್ರಹವನ್ನು ಪರಿಭ್ರಮಿಸಿತು.
ಹೊಸದಾಗಿ ಪತ್ತೆಯಾದ 2024 PT5, ಹಿಂದೆ ಪತ್ತೆಯಾಗಿದ್ದ 2022 NX1ನೊಂದಿಗೆ ಹೋಲಿಕೆ ಹೊಂದಿದೆ. ಇದು 2051 ರ ಸುಮಾರಿಗೆ ಮತ್ತೊಮ್ಮೆ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.