ಮುಂಬೈ: ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಹಳಿ ಮೇಲೆ ಹೋಗುತ್ತಿದ್ದ ಯುವತಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆಕೆ ಸಾವವನ್ನಪ್ಪಿರುವ ಘಟನೆ ಮುಂಬೈನ ಥಾಣೆಯ ಸಮೀಪದ ಕಲ್ಯಾಣ ನಗರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮಹಾರಾಷ್ಟ್ರದ ಕಲ್ಯಾಣ ಟೌನಶಿಪ್‍ನ ಲೋಕ ಉದಯಾನ್ ಕಾಂಪ್ಲೆಕ್ಸ್ ನಿವಾಸಿ ಅಂತುದೇವಿ ದುಬೆ(28) ಮೃತ ಯುವತಿ. ಈಕೆ ಬುಧವಾರ ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯುವತಿ ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ರೈಲ್ವೆ ಹಳಿ ಮೇಲೆ ಹೋಗುತ್ತಿದ್ದಳು. ಈ ವೇಳೆ ವೇಗದಿಂದ ಮುಂಬೈ ಲೋಕಲ್ ರೈಲು ಬಂದಿದ್ದು, ಇಯರ್‌ಫೋನ್ ಧರಿಸಿದ್ದ ಕಾರಣಕ್ಕೆ ರೈಲು ಬಂದಿದ್ದು ಆಕೆಗೆ ತಿಳಿಯಲಿಲ್ಲ. ಸಾಂಗಲ್ವಾಡಿ ಬಳಿಯ ಕಲ್ಯಾಣ ನಿಲ್ದಾಣದಲ್ಲಿ ವೇಗವಾಗಿ ಬರುತ್ತಿದ್ದ ರೈಲು ಯುವತಿಗೆ ಡಿಕ್ಕಿ ಹೊಡೆದಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಈ ಬಗ್ಗೆ ರೈಲ್ವೆ ಪೊಲೀಸರು ಮಾತನಾಡಿ, ಯುವತಿ ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಹೋಗುತ್ತಿದ್ದಳು, ಇದೇ ವೇಳೆ ರೈಲು ಆಕೆಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.