ಬೆಂಗಳೂರು: ಮೊನ್ನೆ ಮೊನ್ನೆ ತಾನೆ ನವರಾತ್ರಿ ಹಬ್ಬದ ಬಸ್ ಅಲಂಕಾರಕ್ಕೆ 10 ರೂ. ಬಿಡುಗಡೆ ಮಾಡಿದ್ದ ಕೆಎಸ್‌ಆರ್‌ಟಿಸಿ ಈಗ ಸಿಹಿ ಖರೀದಿಗೆ 20 ರೂ. ಬಿಡುಗಡೆ ಮಾಡಿ ಚರ್ಚೆಗೆ ಗ್ರಾಸವಾಗಿದೆ.
ಹೌದು. ಅಕ್ಟೋಬರ್ 22 ರಂದು ಒಂದೇ ದಿನ 18.16 ಕೋಟಿ ರೂ. ದಾಖಲೆಯ ಆದಾಯಗಳಿಸಿದೆ. ಒಂದೇ ದಿನ ಭರ್ಜರಿ ಆದಾಯಗಳಿಸಿದ ಖಷಿಯನ್ನು ಸಿಬ್ಬಂದಿಯ ಜೊತೆ ಹಂಚಿಕೊಂಡ ಕೆಎಸ್‌ಆರ್‌ಟಿಸಿ ತಲಾ ಸಿಬ್ಬಂದಿಗೆ 20 ರೂ. ಬಿಡುಗಡೆ ಮಾಡಿದೆ. 20 ರೂ. ಬಿಡುಗಡೆ ಮಾಡಿ ನಿಮ್ಮ ಕುಟುಂಬದವರೊಡನೆ ಸಿಹಿ ಹಂಚಿಕೊಳ್ಳಿ ಎಂದು ಸುತ್ತೋಲೆ ಹೊರಡಿಸಿದೆ.
Advertisement
Advertisement
Advertisement
Advertisement
ಸುತ್ತೋಲೆಯಲ್ಲಿ ಏನಿದೆ?
ಅಕ್ಟೋಬರ್ 22 ರಂದು ನಿಗಮವು ಒಟ್ಟು 18.26 ಕೋಟಿ ರೂ, ಅತ್ಯಧಿಕ ಆದಾಯಗಳಿಸಿದೆ. ಈ ಆದಾಯವು ಪ್ರಸಕ್ತ ವರ್ಷದಲ್ಲಿನ ನಿಗಮ ಗಳಿಸಿದ ಅತಿ ಹೆಚ್ಚು ದಿನದ ಆದಾಯವಾಗಿದ್ದು, ಸಮಸ್ತ ಅಧಿಕಾರಿ/ ಸಿಬ್ಬಂದಿ ಅವಿರತ ಪರಿಶ್ರಮ ಮತ್ತು ಬದ್ಧತೆಯ ಪ್ರತಿಫಲವಾಗಿರುತ್ತದೆ.
ನಿಗಮದ ಎಲ್ಲ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಉತ್ತಮ ಕಾರ್ಯಯೋಜನೆಯ ಮೂಲಕ ಅನುಸೂಚಿಗಳನ್ನು ಸಕಾಲಕ್ಕೆ ಕಾರ್ಯಾಚರಣೆ ಮಾಡಿ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಸಂಪರ್ಕವನ್ನು ಒದಗಿಸುವುದರ ಮೂಲಕ ನಿಗಮಕ್ಕೆ ಅತ್ಯುತ್ತಮ ಸಾರಿಗೆ ಆದಾಯವನ್ನು ತಂದಿರುವ ನಿಗಮದ ಸಮಸ್ತ ಅಧಿಕಾರಿ/ ನೌಕರರು ಮತ್ತು ಅವರ ಕುಟುಂಬ ವರ್ಗದವರಿಗೆ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ನಿಗಮದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಸಿಹಿ ಹಂಚಲು ತಲಾ 20 ರೂ. ಸೂಕ್ತಾಧಿಕಾರಿಗಳಾದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಮಂಜೂರು ಮಾಡಿದ್ದು, ಪ್ರತಿಯೊಬ್ಬ ಸಿಬ್ಬಂದಿಗೆ ಸಿಹಿ ಹಂಚಲು ಕ್ರಮ ಕೈಗೊಳ್ಳುವುದು. ಇದನ್ನೂ ಓದಿ: 15 ಜನರ ಪ್ರಾಣ ಹೋಗುತ್ತೆ ಹುಷಾರ್- ಜ್ಯೋತಿಷಿ ಮಾತಿಗೆ ಹೆದರಿ 1 ತಾಸು ತಡವಾಗಿ ಬಸ್ ಹೊರತೆಗೆದ ಬಿಎಂಟಿಸಿ ಡ್ರೈವರ್!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv