ವಿಜಯಪುರ: ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್ (Micro Finance) ಹಾವಳಿ ಹೆಚ್ಚಾಗಿದ್ದು, ಬೆಳ್ಳಂಬೆಳಿಗ್ಗೆ ಮೈಕ್ರೋ ಫೈನಾನ್ಸ್, ಅಕ್ರಮ ಬಡ್ಡಿ ದಂಧೆಕೋರರ ಮನೆ ಮೇಲೆ ವಿಜಯಪುರ ಪೊಲೀಸರ ದಾಳಿ ನಡೆಸಿ, ಬಿಸಿ ಮುಟ್ಟಿಸಿದ್ದಾರೆ.ಇದನ್ನೂ ಓದಿ: ಅತ್ತೆಯ ಕೊಲೆಗೆ ವೈದ್ಯರ ಬಳಿ ಮಾತ್ರೆ ಕೇಳಿದ್ದ ಸೊಸೆ ಕೊನೆಗೂ ಪತ್ತೆ
Advertisement
ವಿಜಯಪುರದಲ್ಲಿ ಕಳೆದ ಕೆಲವು ವಾರಗಳಿಂದ ಮೈಕ್ರೋಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಜೊತೆಗೆ ಬಡ್ಡಿ, ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ಕೂಡ ಹೆಚ್ಚಾಗಿದೆ. ಹೀಗಾಗಿ ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶದ ಮೇರೆಗೆ ಬೆಳ್ಳಂಬೆಳಿಗ್ಗೆ ಮನೆಗಳ ಮೇಲೆ ದಾಳಿ ನಡೆಸಿ, ಶಾಕ್ ನೀಡಿದ್ದಾರೆ.
Advertisement
ಜಿಲ್ಲೆಯ ಹಲವೆಡೆ ಪೋಲಿಸರು ದಾಳಿ ನಡೆಸಿದ್ದು, ದಾಳಿ ಮಾಡಿ ಅಕ್ರಮ ಹಣ, ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. ಮೈಕ್ರೋಫೈನಾನ್ಸ್ ಹಾಗೂ ಅಕ್ರಮ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬಡ ಜನರು ಬೇಸತ್ತು ಹೋಗಿದ್ದು, ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದಾಳಿ ನಡೆಸಿದ್ದಾರೆ.ಇದನ್ನೂ ಓದಿ:Champions Trophy 2025 | ಇಂದು ಭಾರತ-ಬಾಂಗ್ಲಾ ಮುಖಾಮುಖಿ – ಹಿಟ್‌ಮ್ಯಾನ್ ಪಡೆಗೆ ಗೆಲುವಿನ ತವಕ
Advertisement
Advertisement