ಬೆಂಗಳೂರು: ಭರ್ಜರಿ ಖ್ಯಾತಿಯ ಧ್ರುವ ಸರ್ಜಾ ನಟಿಸಲು ಸಜ್ಜಾಗಿರುವ `ಪೊಗರು’ ಚಿತ್ರದ ಮುಹೂರ್ತ ಇಂದು ಬೆಳ್ಳಂಬೆಳಗ್ಗೆ ನೆರವೇರಿತು.
ಬಸವೇಶ್ವರ ನಗರದ ಗಣಪತಿ ಸನ್ನಿಧಿಯಲ್ಲಿ ಚಿತ್ರದ ಮೂಹರ್ತ ಸಮಾರಂಭ ನಡೆದಿದ್ದು, ಚಿತ್ರದ ನಾಯಕ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್ ಮತ್ತು ನಿರ್ಮಾಪಕ ಗಂಗಾಧರ್ ಉಪಸ್ಥಿತರಿದ್ದರು. ಧ್ರುವ ಸರ್ಜಾ ಮತ್ತು ನಂದಕಿಶೋರ್ ಸಾರಥ್ಯದ ಚೊಚ್ಚಲ ಸಿನಿಮಾ ಇದಾಗಿದ್ದು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.
Advertisement
Advertisement
ಈ ಚಿತ್ರದಲ್ಲಿ ಮೂರು ಶೇಡ್ ಗಳಲ್ಲಿ ಧ್ರುವ ಸರ್ಜಾ ಕಾಣಿಸಿಕೊಳ್ಳುತ್ತಿದ್ದು, ಸ್ಕೂಲ್ ಲೈಫ್ ಕ್ಯಾರೆಕ್ಟರ್ ಗಾಗಿ ತಮ್ಮ ತೂಕವನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನೂ ಈ ಸಿನಿಮಾದ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದು ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆಗಳಿವೆ.