ನವದೆಹಲಿ: ಎಲ್‌ಪಿಜಿ (LPG) ಬೆಲೆಯಲ್ಲಿ 200 ರೂ. ಇಳಿಕೆ, ಉಜ್ವಲ ಯೋಜನೆಯ ಸಂಪರ್ಕವನ್ನು 75 ಲಕ್ಷ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರದ ಬೆನ್ನಲ್ಲೇ ಅವಧಿಗೂ ಮುನ್ನ ಲೋಕಸಭೆ ಚುನಾವಣೆ (Lok Sabha Election) ನಡೆಯುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಡಿಸೆಂಬರ್ ಅಥವಾ ಜನವರಿಯಲ್ಲಿ ಚುನಾವಣೆ ನಡೆಯಲಿದೆ ಎನ್ನುವ ಹೇಳಿಕೆ ನೀಡಿದ್ದು, ಇದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.
ಆದರೆ ಕೇಂದ್ರ ಸರ್ಕಾರ ಉನ್ನತ ಮೂಲಗಳು ಈ ಎಲ್ಲಾ ಊಹೆಗಳನ್ನು ಅಲ್ಲಗೆಳಿದಿದೆ. ಸರ್ಕಾರ ಯಾವುದೇ ಅಧಿಕಪೂರ್ವ ಚುನಾವಣೆಗೆ ಹೋಗುವುದಿಲ್ಲ. 2019ರಲ್ಲಿ 303 ಸ್ಥಾನಗಳನ್ನು ನೀಡುವ ಮೂಲಕ ಅಧಿಕಾರ ನೀಡಿದ್ದಾರೆ. ಅವಧಿಪೂರ್ವವಾಗಿ ಚುನಾವಣೆಗೆ ಹೋಗುವುದು ಜನಾದೇಶದ ವಿರುದ್ಧದ ನಿರ್ಧಾರ ಎಂದು ಸಚಿವರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಹಿಂದೇಟು
ವರ್ಷಾಂತ್ಯಕ್ಕೆ ಲೋಕಸಭೆ ಚುನಾವಣೆ ಸುದ್ದಿಯನ್ನು ಮತ್ತೊಬ್ಬ ಹಿರಿಯ ಬಿಜೆಪಿ (BJP) ನಾಯಕ ನಿರಾಕರಿಸಿದ್ದಾರೆ. ಬಿಜೆಪಿಗೆ ಅವಧಿಪೂರ್ವ ಚುನಾವಣೆಗೆ ಹೋಗುವ ಅಗತ್ಯ ಇಲ್ಲ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್ ಅಥವಾ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರಂತಹ ನಾಯಕರನ್ನು ಮೋದಿ ಹಿಂದಿಕ್ಕಿದ್ದಾರೆ. ಮುಂಚಿತವಾಗಿ ಚುನಾವಣೆಗೆ ಹೋಗುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಲ್ಯಾಪ್‌ಟಾಪ್ ತಯಾರಿಸಲು 32 ಕಂಪನಿಗಳಿಂದ ಅರ್ಜಿ – 75 ಸಾವಿರ ಉದ್ಯೋಗ ಸೃಷ್ಟಿ
ಇತ್ತೀಚಿಗೆ ನಡೆದ ರಿಸರ್ಚ್ ಸಮೀಕ್ಷೆಯ ಪ್ರಕಾರ ಸುಮಾರು 80% ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಪೂರಕ ಅಭಿಪ್ರಾಯವನ್ನು ಹೊಂದಿದ್ದಾರೆ. ಭಾರತವು ಇತ್ತೀಚಿಗೆ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು 10 ಭಾರತೀಯರಲ್ಲಿ ಏಳು ಮಂದಿ ನಂಬುತ್ತಾರೆ ಎಂದು ಹೇಳಿದೆ. ಮೋದಿಯವರ ಅಭಿವೃದ್ಧಿ ರಾಜಕೀಯ ಅರಿಯದೇ ವಿಪಕ್ಷ ನಾಯಕರು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: ಮಹಾಭಾರತವನ್ನು ಕಾಜಿ ನಜ್ರುಲ್ ಇಸ್ಲಾಂ ಬರೆದಿದ್ದಾರೆ: ಮಮತಾ ಬ್ಯಾನರ್ಜಿ
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ತಾನು ದುರ್ಬಲ ಎಂದು ಪರಿಗಣಿಸಿರುವ 161 ಲೋಕಸಭಾ ಸ್ಥಾನಗಳನ್ನು ಗುರುತಿಸಿದೆ ಮತ್ತು ಇವುಗಳನ್ನು ಗೆಲ್ಲುವ ಗುರಿ ಹೊಂದಿದೆ. ಪಕ್ಷವು ದೇಶಾದ್ಯಂತ ದುರ್ಬಲ ಬೂತ್‌ಗಳನ್ನು ಪತ್ತೆ ಮಾಡಲು ದಿಲೀಪ್ ಘೋಷ್ ಮತ್ತು ಬಿಜಯಂತ್ ಜಯ್ ಪಾಂಡಾ ಸೇರಿದಂತೆ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ. ಇದನ್ನೂ ಓದಿ: 2024ಕ್ಕೆ ಮತ್ತೆ ಬರ್ತೀನಿ – ಹವಾ ಎಬ್ಬಿಸಿದ ಮೋದಿ ಟರ್ಮಿನೇಟರ್ ಪೋಸ್ಟರ್
ಈ 161 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಸಾಧನೆ ಶೂನ್ಯವಾಗಿದೆ. ಈ ಹಿನ್ನೆಲೆ ಉನ್ನತ ನಾಯಕರನ್ನು ಪ್ರವಾಸಕ್ಕೆ ಕಳುಹಿಸಲಾಗಿದೆ ಮತ್ತು ಈ ಕ್ಷೇತ್ರಗಳಲ್ಲಿ ಬಿಜೆಪಿ ಏನಾಗಿದೆ ಎಂಬುದರ ಕುರಿತು ವರದಿಗಳನ್ನು ಸಿದ್ಧಪಡಿಸಲು ಕೇಳಲಾಗಿದೆ. ಸೆಪ್ಟಂಬರ್ 1ರಂದು ಹಿರಿಯ ನಾಯಕರು ಈ ವರದಿಯನ್ನು ಪರಿಶೀಲಿಸಲಿದ್ದಾರೆ. ಈ ಕ್ಷೇತ್ರಗಳಿಗೆ ಮುಂಚಿತವಾಗಿ ಟಿಕೆಟ್ ಘೋಷಣೆಯಾಗಬಹುದು. ಆದರೆ ಅವಧಿಗೂ ಮುಂಚಿತವಾಗಿ ಚುನಾವಣೆ ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ: ಎಎಪಿ ಮುಖ್ಯ ವಕ್ತಾರೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]