ಗಾಂಧಿನಗರ: ಈ ಹಿಂದೆ ಸ್ಪರ್ಧೆಗಳಿಗೆ ಕ್ರೀಡಾಪಟುಗಳ ಆಯ್ಕೆಯಲ್ಲಿ ಪಾರದರ್ಶಕತೆಯ ಕೊರತೆ ಇತ್ತು. ಇದರಿಂದಾಗಿ ಕ್ರೀಡಾಪಟುಗಳ ಪ್ರತಿಭೆ ವ್ಯರ್ಥವಾಗುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದರು.
ಗುಜರಾತ್ ಸರ್ಕಾರವು ಅಹಮದಾಬಾದ್‍ನಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾ ಸ್ಪರ್ಧೆ ‘ಖೇಲ್ ಮಹಾಕುಂಭ’ದ 11ನೇ ಆವೃತ್ತಿಯನ್ನು ಮೋದಿ ಅವರು ಉದ್ಘಾಟಿಸಿದರು. ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ, ಸ್ಪರ್ಧೆಗಳಿಗೆ ಕ್ರೀಡಾಪಟುಗಳ ಆಯ್ಕೆಯಲ್ಲಿ ಪಾರದರ್ಶಕತೆಯ ಕೊರತೆ ಇತ್ತು. ಇದರಿಂದಾಗಿ ನಮ್ಮ ಕ್ರೀಡಾಪಟುಗಳ ಪ್ರತಿಭೆ ವ್ಯರ್ಥವಾಯಿತು. ಆದರೆ ಮುಂದೆ ಈ ರೀತಿ ಇರುವುದಿಲ್ಲ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ತಪ್ಪಿಸಿಕೊಂಡು ಹೋದ ಪೆಂಗ್ವಿನ್ – ಕೊನೆಗೂ ಅಧಿಕಾರಿಗಳ ಕೈಗೆ
Khel Mahakumbh has revolutionised the sports ecosystem. Inaugurating the 11th edition. https://t.co/aoHeflcft6
— Narendra Modi (@narendramodi) March 12, 2022
ಈ ಹಿಂದೆ ಕ್ರೀಡಾಪಟುಗಳು ಸಾಧನೆ ಮಾಡಬೇಕಾದರೆ ತುಂಬಾ ಕಷ್ಟಪಡಬೇಕಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕ್ರೀಡಾಪಟುಗಳು ಯಶಸ್ಸನ್ನು ಸಾಧಿಸುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿ ಪದಕಗಳ ಹೊಳಪು ನಮ್ಮ ಯುವಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ ಎಂದು ಉತ್ಸುಕರಾಗಿ ಹೇಳಿದರು.
ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಭಾರತ ಏಳು ಪದಕಗಳನ್ನು ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ 19 ಪದಕಗಳನ್ನು ಗೆದ್ದಿದೆ. ಇದು ಆರಂಭವಾಗಿದೆ. ಭಾರತವನ್ನು ಹಿಮ್ಮೆಟ್ಟಿಸಲು ಯಾರಿಂದಲ್ಲೂ ಆಗುವುದಿಲ್ಲ, ಭಾರತವು ದಣಿದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಪ್ಪು ಬೇಡವೆಂದ ಸಾಂಗ್ ಮತ್ತೆ ಪ್ರೇಕ್ಷಕರ ಮುಂದೆ – ಯಾವುದು ಈ ಸಾಂಗ್?
ಉಕ್ರೇನ್‍ನಿಂದ ಹಿಂದಿರುಗಿದ ಯುವಕರು ಈಗ ಉದಯೋನ್ಮುಖ ಭಾರತದ ಪ್ರಭಾವವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.