ಮುಂಬೈ: ಯಂಗ್ ಆಗಿದ್ದರೂ ಸಿನಿಮಾದಲ್ಲಿ 30 ವರ್ಷದ ನಾಯಕರಿಗೆ ಬಾಲಿವುಡ್ ನಟಿ ಲಾರಾ ದತ್ತ ಭೂಪತಿ ತಾಯಿ ಪಾತ್ರವನ್ನು ಮಾಡುತ್ತಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತಮ್ಮ ಸಿನಿಜರ್ನಿಯಲ್ಲಿ ಹಿಂದೆ ಮತ್ತು ಪ್ರಸ್ತುತ ಯಾವ ರೀತಿ ಚಿತ್ರರಂಗ ಬದಲಾಗಿದೆ ಎಂದು ವಿವರಿಸಿದ್ದಾರೆ.
Advertisement
ಸಿನಿ ಜರ್ನಿ ಕುರಿತು ಮಾತನಾಡಿದ ಅವರು, ನನಗೆ ಇತ್ತೀಚಿಗೆ ಬರುತ್ತಿರುವ ಪ್ರಾಜೆಕ್ಟ್ ಗಳನ್ನು ನೋಡಿದಾಗ, ಇದು ತೃಪ್ತಿಕರ ಅನುಭವ ಕೊಡುತ್ತಿದೆ. ಏಕೆಂದರೆ ನಾನು 40ರ ದಶಕದಲ್ಲಿ ತಾಯಿ ಪಾತ್ರ ಮತ್ತು ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡುತ್ತಿದ್ದೆ. ನಾಯಕರಿಗೆ ಕೆಲವೊಮ್ಮೆ ತಾಯಿ ಪಾತ್ರದಲ್ಲಿಯೂ ನಟಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಧರಿಸಿರುವ ಗೌನ್ ಬೆಲೆಯಷ್ಟು ಗೊತ್ತಾ? ಲಕಲಕ ಹೊಳಿತಿದ್ದಾಳೆ ರವಿಮಾಮನ ಬೆಡಗಿ
Advertisement
Advertisement
ಬಣ್ಣದ ಲೋಕದಲ್ಲಿ ನಾನಾ ಭಾಷೆಯ ಸಿನಿಮಾಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಎಲ್ಲರೂ ಯಾವ ರೀತಿ ಕೆಲಸ ಮಾಡುತ್ತಾರೆ ಎಂದು ಅರಿತುಕೊಂಡಿದ್ದೇನೆ. 40 ವರ್ಷಕ್ಕಿಂತ ಹೆಚ್ಚು ವಯಸ್ಸಾದ ನಟಿಗೆ ಹಿಕ್ಅಪ್ಸ್ ಮತ್ತು ಹುಕ್ಅಪ್ಗಳಲ್ಲಿ ಡೇಟಿಂಗ್ ಮಾಡುವ ದೃಶ್ಯಗಳನ್ನು ಹೆಚ್ಚು ಮಾಡಲು ಅವಕಾಶಗಳಿರುವುದಿಲ್ಲ. ಅದನ್ನು ಈ ಹಿಂದೆ, ಜನರು ಬೇರೆ ರೀತಿ ನೋಡುವ ಕಾಲವಿತ್ತು. ಆದರೆ ಈಗ ಕಾಲ ಬದಲಾಗಿದೆ ಎಂದರು.
Advertisement
ನಾನು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 2003ರಲ್ಲಿ. ನಾನು ಆಗ ಬಂದಾಗ ಇದ್ದ ಚಿತ್ರರಂಗಕ್ಕೂ ಈಗಿನ ಚಿತ್ರಣಕ್ಕೂ ತುಂಬಾ ವ್ಯತ್ಯಾಸವಿದೆ. ಹಿಂದೆ ಮಹಿಳೆಯರಿಗೆ ಹೆಚ್ಚು ಶಾಂತಿ ಸ್ವರೂಪದ, ಸಹಾನುಭೂತಿ ಸ್ವರೂಪದ ಪಾತ್ರಗಳನ್ನು ಹೆಚ್ಚು ಕೊಡುತ್ತಿದ್ದರು. ಈಗ ಹೀರೋಗಳಂತೆ ನಟಿಗೂ ಸಹ ಆಕ್ಷನ್ ದೃಶ್ಯಗಳಲ್ಲಿ ನಟಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.
40ರ ಹರೆಯದಲ್ಲಿ ಸಿನಿಮಾರಂಗದ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಇಂದು ಸಿನಿ ಜನರ ಮನಸ್ಥಿತಿ ಮತ್ತು ಮಹಿಳೆಯರ ಮನೋವಿಜ್ಞಾನ ನನಗೆ ತಿಳಿದಿದೆ. ನಮ್ಮಲ್ಲಿ ಮಹಿಳೆಯರಿಗೂ ಈಗ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳಿವೆ. ಆದರೆ ಹಿಂದೆ ಈ ರೀತಿ ಇರಲಿಲ್ಲ. 35 ವರ್ಷ ದಾಟಿದ ನಾಯಕಿಯನ್ನು ತಮ್ಮ ಸಿನಿಮಾದಲ್ಲಿ ನಿರ್ದೇಶಕರುಗಳು ತಾಯಿ ಅಥವಾ ಅಷ್ಟೇನೂ ನಟನೆಗೆ ಅವಕಾಶವಿಲ್ಲದ ಪಾತ್ರಗಳನ್ನು ಕೊಡುತ್ತಿದ್ದರು. ಆದರೆ ಈಗ ಅವರಿಗಾಗಿಯೆ ಕಥೆಗಳನ್ನು ಮಾಡುತ್ತಿರುವುದು ಸಂತೋಷ ತಂದಿದೆ ಎನ್ನುತ್ತಾರೆ ಲಾರಾ.
ನೀವು 55 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನೀವು ಅಜ್ಜಿಯಾಗಿರುತ್ತೀರಿ. ಅಥವಾ ನಿಮ್ಮ 30ರ ಹರೆಯದಲ್ಲಿದ್ದರೆ ನಾಯಕರ ತಾಯಿಯಾಗಿ ಪಾತ್ರ ಮಾಡಬೇಕಾಗುತ್ತೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಇದೆ. ಕೆಲವೊಮ್ಮೆ ಮಹಿಳೆಯರು ನಾಯಕರಿಗೆ ನಾಯಕಿಯಾಗಿ ಕಾಣಿಸಿಕೊಂಡು, ನಂತರದ ದಿನಗಳಲ್ಲಿ ತಾಯಿ ಪಾತ್ರ ಮಾಡಿದ ಉದಾಹರಣೆಗಳು ಇದೆ ಎಂದಿದ್ದಾರೆ. ಇದನ್ನೂ ಓದಿ: ಚೇತನ್ ಅಹಿಂಸಾ ಬಿಡುಗಡೆ – ಖುಷ್ ಆದ ಅಭಿಮಾನಿಗಳು
ಇತ್ತೀಚೆಗೆ ‘ಬೆಲ್ಬಾಟಮ್'(2021) ಸಿನಿಮಾಗಾಗಿ ಲಾರಾ ಅವರಿಗೆ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯ ದೊರೆತಿದೆ. ಪೋಷಕ ಪಾತ್ರಕ್ಕಾಗಿ ಅವರು ಈ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.