– ಅಮೆರಿಕ ದೂತವಾಸ ಕಚೇರಿ ಉದ್ಘಾಟನೆ
ಬೆಂಗಳೂರು: ಇನ್ನು ಮುಂದೆ ಅಮೆರಿಕದ ವೀಸಾ (Visa) ಪಡೆಯಲು ಬೆಂಗಳೂರಿಗರು ಚೆನ್ನೈ, ಹೈದರಾಬಾದ್‌ಗೆ ಹೋಗದೇ ಬೆಂಗಳೂರಿನಲ್ಲೇ (Bengaluru) ಪಡೆಯಬಹುದು. ಬೆಂಗಳೂರಿನಲ್ಲೇ ದೂತವಾಸ ಕಚೇರಿ (US Consulate) ಅಧಿಕೃತವಾಗಿ ಆರಂಭವಾಗಿದ್ದು ಇಂದು (ಜ.17) ಉದ್ಘಾಟನೆಯಾಗಿದೆ.
Advertisement
ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್(Jaishankar), ಭಾರತದಲ್ಲಿರುವ ಅಮರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ತಾತ್ಕಾಲಿಕ ದೂತವಾಸ ಕಚೇರಿಯನ್ನು ಉದ್ಘಾಟಿಸಿದರು.
Advertisement
ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯು.ಮಾರಿಯೆಟ್ ಹೋಟೆಲ್‌ನಲ್ಲಿ ತಾತ್ಕಾಲಿಕ ದೂತಾವಾಸ ಕಚೇರಿ ಕಾರ್ಯಾರಂಭವಾಗಿದೆ. ಮುಂದಿನ ದಿನದಲ್ಲಿ ನಗರದ ಆಯಕಟ್ಟಿನ ಭಾಗದಲ್ಲಿ ಶಾಶ್ವತ ಕಚೇರಿ ಸ್ಥಾಪಿಸಲಾಗುವುದು. ಶಾಶ್ವತ ಕಚೇರಿ ಸ್ಥಾಪನೆಯಾಗುವರೆಗೂ ಖಾಸಗಿ ಹೋಟೆಲಿನಲ್ಲಿ ಕಾರ್ಯನಿರ್ವಹಿಸಲಿದೆ.
Advertisement
My remarks at the opening of US Consulate in Bengaluru.
🇮🇳 🇺🇸
https://t.co/taChfIOH41
— Dr. S. Jaishankar (@DrSJaishankar) January 17, 2025
Advertisement
ಇಲ್ಲಿಯವರೆಗೆ ಚೆನ್ನೈ, ಹೈದರಾಬಾದ್, ಮುಂಬೈ, ಕೋಲ್ಕತ್ತಾಗಳಲ್ಲಿ ಅಮೆರಿಕದ ದೂತಾವಾಸ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಭಾರತ ಮತ್ತು ಅಮೆರಿಕ ಸಂಬಂಧ ಬಲವರ್ಧನೆಯಾಗಿ ಬೆಂಗಳೂರಿನಲ್ಲಿ ಅಮೆರಿಕದ ದೂತಾವಾಸ ಕಚೇರಿ ಆರಂಭವಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಚಿತ್ರವಿಚಿತ್ರ ಸನ್ನಿವೇಶ – 9 ವರ್ಷದಿಂದ ಸಾಧು ತಲೆಯ ಮೇಲೆ ಕುಳಿತ ಪಾರಿವಾಳ!
ಅಮೆರಿಕದ ಪ್ರಮುಖ ನಗರಗಳಿಂದ ಬೆಂಗಳೂರಿಗೆ ನೇರ ವಿಮಾನಯಾನ ಸೌಲಭ್ಯ ಇದೆ. ಆದರೆ ಆದರೆ ವೀಸಾ ಮತ್ತಿತರ ಕೆಲಸಗಳಿಗೆ ಬೇಕಾದ ಸೌಕರ್ಯ ಇರಲಿಲ್ಲ. ಇನ್ನು ಮುಂದೆ ಅಮೆರಿಕಕ್ಕೆ ಶಿಕ್ಷಣ, ಉದ್ಯೋಗ, ವ್ಯವಹಾರಕ್ಕೆ ಹೋಗೋರಿಗೆ ಇಲ್ಲೇ ವೀಸಾ ಸಿಗಲಿದೆ.
My dear Bengaluru,
It’s official. The US Consulate is opening on January 17th.
It’s been made possible only and only because of PM @narendramodi and EAM @DrSJaishankar’s efforts.
What better way to thank our EAM than with our own Mysuru Pak! pic.twitter.com/uo85y2vsfl
— Tejasvi Surya (@Tejasvi_Surya) January 15, 2025
ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಎಂಬಿ ಪಾಟೀಲ್, ಸಚಿವ ಪ್ರಿಯಾಂಕ್ ಖರ್ಗೆ, ಸಂಸದರಾದ ತೇಜಸ್ವಿಸೂರ್ಯ, ಪಿ ಸಿ ಮೋಹನ್, ಡಾ ಮಂಜುನಾಥ್, ಐಟಿ ಉದ್ಯಮಿಗಳಾದ ಕಿರಣ್ ಮಜುಂದಾರ್ ಷಾ, ಕ್ರಿಸ್ ಗೋಪಾಲಕೃಷ್ಣನ್, ಯುಎಸ್ ದೂತವಾಸ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಆರಂಭದಲ್ಲಿ ಒಂದು ಒಂದು ಮಿತಿಯಲ್ಲಿ ವೀಸಾ ನೀಡಲಾಗುತ್ತದೆ. ಶಾಶ್ವತ ಕಚೇರಿ ಆರಂಭವಾದ ಬಳಿಕ ಸಂಪೂರ್ಣವಾಗಿ ಕಚೇರಿ ಸಿಬ್ಬಂದಿ ತಮ್ಮ ಕೆಲಸದಲ್ಲಿ ತೊಡಗಲಿದ್ದಾರೆ.