Monday, 16th July 2018

Recent News

ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯ ರಕ್ಷಣೆ

ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯನ್ನು ಮಂಡ್ಯದ ಉರಗ ಪ್ರೇಮಿ ನಾರಾಯಣ್ ರಕ್ಷಣೆ ಮಾಡಿ ಚಿಕಿತ್ಸೆ ನೀಡೋ ಮೂಲಕ ಮಾನವೀಯತೆ ತೋರಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯ ನಗುವಿನಹಳ್ಳಿ ಬಳಿ ಗರುಡ ಪಕ್ಷಿಗೆ ಬಸ್ಸೊಂದು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಪರಿಣಾಮ ಗರುಡ ಪಕ್ಷಿಯ ಎಡಭಾಗದ ರೆಕ್ಕೆಗೆ ಗಂಭೀರ ಗಾಯವಾಗಿತ್ತು.

ಈ ವೇಳೆ ಅದೇ ಮಾರ್ಗದಲ್ಲಿ ಆಟೋದಲ್ಲಿ ಹೋಗುತ್ತಿದ್ದ ನಾರಾಯಣ್, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗರುಡ ಪಕ್ಷಿಯನ್ನ ಗಮನಿಸಿದ್ದಾರೆ. ಕೂಡಲೇ ಮನೆಗೆ ವಾಪಾಸ್ ಬಂದು ಗರುಡಕ್ಕೆ ನಾಟಿ ಔಷಧಿಯ ಚಿಕಿತ್ಸೆ ಕೊಟ್ಟಿದ್ದಾರೆ. ಇದೀಗ ಗರುಡ ಪಕ್ಷಿ ಚೇತರಿಸಿಕೊಳ್ಳುತ್ತಿದೆ.

Leave a Reply

Your email address will not be published. Required fields are marked *