ಬೆಂಗಳೂರು: ಮುಜರಾಯಿ ಇಲಾಖೆ (Muzrai Department) ರಾಜ್ಯದ ಜನರಿಗೆ ಸಿಹಿ ಸುದ್ದಿ ನೀಡಿದ್ದು, ಇ-ಪ್ರಸಾದ (E-Prasad) ಸೇವೆ ಮೂಲಕ ರಾಜ್ಯದ 400 ದೇಗುಲಗಳ ಪ್ರಸಾದ 15 ದಿನಗಳಲ್ಲಿ ಮನೆ ಬಾಗಿಲಿಗೆ ಬರಲಿದೆ.
ಈಗಾಗಲೇ ಧನುರ್ಮಾಸ ಮುಗಿದಿದ್ದು, ಗೃಹಪ್ರವೇಶ, ನಾಮಕರಣ ಸೇರಿದಂತೆ ಮದುವೆ ಸೀಜನ್ ಆರಂಭವಾಗಿದೆ. ಇಂತಹ ಶುಭ ಸಂದರ್ಭದಲ್ಲಿ ದೂರದ ಊರುಗಳಲ್ಲಿರುವ ದೇವಸ್ಥಾನಕ್ಕೆ ಹೋಗಿ ಪ್ರಸಾದ ತರುವುದು ಕಷ್ಟವಾಗುತ್ತದೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಮುಜರಾಯಿ ಸಿಹಿ ಸುದ್ದಿ ನೀಡಿದ್ದು, ಮನೆ ಬಾಗಿಲಿಗೆ ದೇವರ ಪ್ರಸಾದ ತಲುಪಲಿದೆ.ಇದನ್ನೂ ಓದಿ: ಮಾ.17ಕ್ಕೆ ಪುನೀತ್ ಹುಟ್ಟುಹಬ್ಬ – ‘ಅಪ್ಪು’ ಸಿನಿಮಾ ರೀ-ರಿಲೀಸ್
ಇತ್ತೀಚಿನ ದಿನಗಳಲ್ಲಿ ದೂರದ ದೇವಸ್ಥಾನಗಳಿಗೆ ಹೋಗಿ, ಜನರ ದಟ್ಟಣೆಯ ನಡುವೆ ದೇವರ ದರ್ಶನ ಪಡೆಯುವುದು ಕಷ್ಟ. ಈ ಹಿನ್ನೆಲೆ ದೇವಸ್ಥಾನಕ್ಕೆ ತೆರಳಿ ಪ್ರಸಾದ ಪಡೆಯಲು ಕಷ್ಟವಾಗುವ ಹಿನ್ನೆಲೆ ಭಕ್ತರ ಅನುಕೂಲಕ್ಕಾಗಿ ಮುಜರಾಯಿ ಇಲಾಖೆ ಹೊಸ ಪ್ರಯೋಗ ನಡೆಸಿದೆ. ಈ ಮೂಲಕ ರಾಜ್ಯದ ಪ್ರಮುಖ 10 ದೇವಾಲಯಗಳ ಪ್ರಸಾದ ಆನ್‌ಲೈನ್‌ನಲ್ಲಿ ಮನೆ ಬಾಗಿಲಿಗೆ ತಲುಪಿಸುವ ಪ್ರಯೋಗ ಆರಂಭಿಸಿತ್ತು. ಈ ಇ-ಪ್ರಸಾದ ಸೇವೆಗೆ ಭಕ್ತಾದಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಇದುವರೆಗೂ ಅಂದಾಜು 25 ಸಾವಿರ ಭಕ್ತಾದಿಗಳು ಇ-ಪ್ರಸಾದ ಪಡೆದಿದ್ದಾರೆ. ಹೀಗಾಗಿ ಮುಂದಿನ 15 ದಿನಗಳಲ್ಲಿ ರಾಜ್ಯದ 400 ದೇವಾಲಯಗಳಲ್ಲಿ ಇ-ಪ್ರಸಾದ ಸೇವೆ ಆರಂಭಿಸುವ ಯೋಜನೆಯನ್ನು ಮುಜರಾಯಿ ಇಲಾಖೆ ಹಾಕಿಕೊಂಡಿದೆ.
ಇ-ಪ್ರಸಾದದ ಅನುಕೂಲಗಳು:
- ವೃದ್ಧರು ಮನೆಯಲ್ಲೇ ಕುಳಿತು ತಮಗಿಷ್ಟವಾದ ದೇವಸ್ಥಾನದ ಪ್ರಸಾದ ತರಿಸಿಕೊಳ್ಳಬಹುದು.
- ವಿಶೇಷಚೇತನರು, ಅಂಧರು ಹೀಗೆ ಹಲವರಿಗೆ ಈ ಸೇವೆ ತುಂಬಾ ಉಪಯೋಗವಾಗಲಿದೆ.
- ವಿಶೇಷ ದಿನಗಳಲ್ಲಿ ದೇವಸ್ಥಾನಗಳಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ.
- ಭಕ್ತರು ದೇವಸ್ಥಾನಕ್ಕೆ ಹೋದರೂ ಪ್ರಸಾದ ಸ್ವೀಕರಿಸುವುದು ಕಷ್ಟವಾಗುತ್ತದೆ
- ಪುಟ್ಟ ಮಕ್ಕಳಿರುವ ಪೋಷಕರು, ಮನೆಯಿಂದ ಹೊರಬರಲಾಗದ ಗರ್ಭಿಣಿಯರು ಈ ಸೇವೆಯ ಮೂಲಕ ಪ್ರಸಾದ ಬುಕ್ ಮಾಡಿಕೊಳ್ಳಬಹುದು.ಇದನ್ನೂ ಓದಿ: ರಾಜಸ್ಥಾನ | ಹೋಳಿ ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಯುವಕನ ಬರ್ಬರ ಹತ್ಯೆ