ಬೆಂಗಳೂರು : ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಇನ್ನುಂದೆ ಸಿಕ್ಕ ಸಿಕ್ಕ ಹಾಗೆ ರಜೆ ಹಾಕುವ ಹಾಗಿಲ್ಲ. ಮನಬಂದಂತೆ ರಜೆ ತೆಗೆದುಕೊಳ್ಳುವ ಹಾಗಿಲ್ಲ. ಇವತ್ತು ರಜೆ ಹಾಕಿ ನಾಳೆ ಲೆಟರ್ ಕೊಡೋಣ ಎನ್ನುವ ಹಾಗಿಲ್ಲ. ಯಾಕಂದ್ರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ರಜೆ ಹಾಕೋ ವ್ಯವಸ್ಥೆಯನ್ನು ಬದಲಾಯಿಸಿದ್ದು, ಇ-ಲೀವ್ ವ್ಯವಸ್ಥೆ ಜಾರಿಗೆ ತಂದಿದೆ.
ಇ-ಲೀವ್ ವ್ಯವಸ್ಥೆ ಸಂಪೂರ್ಣವಾಗಿ ವಿದ್ಯುನ್ಮಾನ ವ್ಯವಸ್ಥೆ ಅಗಿದೆ. ಇಷ್ಟು ದಿನ ರಜೆ ಹಾಕುವವರು ಕೈ ಬರಹದ ಮೂಲಕ ಸಂಬಂಧ ಪಟ್ಟವರಿಗೆ ರಜೆ ಅರ್ಜಿ ಸಲ್ಲಿಸಬೇಕಿತ್ತು. ಆದ್ರೆ ಈಗ ಈ ವ್ಯವಸ್ಥೆಯನ್ನೇ ಬದಲಾವಣೆ ಮಾಡಲಾಗಿದೆ.
Advertisement
Advertisement
ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇಲಾಖೆ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಹೊಸ ವ್ಯವಸ್ಥೆಯಲ್ಲಿ ಸಿಬ್ಬಂದಿಗೆ ನೀಡಿರುವ, ಇ -ಆಫೀಸ್ ಐಡಿ ಮೂಲಕ ರಜೆಗೆ ಅರ್ಜಿ ಸಲ್ಲಿಸಬೇಕು. ರಜೆ ಅನುಮತಿ ಕೂಡ ಇಲ್ಲೇ ಸಿಗುತ್ತದೆ.
Advertisement
ಡಿ ದರ್ಜೆ ವಾಹನ ಸವಾರರನ್ನು ಹೊರತು ಪಡಿಸಿ ಉಳಿದ ಎ, ಬಿ, ಸಿ, ಡಿ ವರ್ಗದ ನೌಕರರು, ಸರ್ಕಾರದ ಎಲ್ಲಾ ಅಧಿಕಾರಿಗಳಿಗೂ ಈ ಹೊಸ ನಿಯಮ ಅನ್ವಯ ಆಗುತ್ತದೆ. 2020 ಜನವರಿ 1 ರಿಂದಲೇ ಇ-ಲೀವ್ ವ್ಯವಸ್ಥೆ ಜಾರಿಗೆ ಬರುತ್ತಿದೆ.