* ಇ-ಖಾತಾ ಪಡೆಯಲು ಲಂಚ ಕೇಳಿದ್ರೆ ಸಹಾಯವಾಣಿಗೆ ಕರೆ ಮಾಡಿ
ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ನಾಗರಿಕರಿಗೆ ಇ-ಖಾತಾ (E-Khata) ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ವೃತ್ತಿಪರ, ಏಕ ಇ-ಖಾತಾ ನಾಗರಿಕ ಸಹಾಯವಾಣಿಯನ್ನು (9480683695) ಪ್ರಾರಂಭಿಸಲಾಗಿದೆ.
Advertisement
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಸಾರ್ವಜನಿಕರಿಗೆ ಇ-ಖಾತಾಗಳು ಸುಗಮವಾಗಿ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಬಿಬಿಎಂಪಿಯು ತಕ್ಷಣದ ಕ್ರಮಗಳನ್ನು ಕೈಗೊಂಡಿದೆ. ಇದನ್ನೂ ಓದಿ: ಸರ್ಜಾಪುರದಿಂದ ಹೆಬ್ಬಾಳದವರೆಗೆ ‘ನಮ್ಮ ಮೆಟ್ರೋ 3ಎ ಹಂತ’ – ಸಚಿವ ಸಂಪುಟ ಅನುಮೋದನೆ
Advertisement
Advertisement
ಬಿಬಿಎಂಪಿಯು ಕೈಗೊಂಡಿರುವ ತಕ್ಷಣದ ಕ್ರಮಗಳ ವಿವರ:
* ವೃತ್ತಿಪರ, ಏಕ ಇ-ಖಾತಾ ನಾಗರಿಕ ಸಹಾಯವಾಣಿ ಪ್ರಾರಂಭ. eKhata Citizen Helpline – 9480683695
* ಯಾರೇ ಲಂಚ ಕೇಳಿದರೆ ಅಥವಾ ವಿಳಂಬವಾದರೆ, ದಯವಿಟ್ಟು ನಾಗರಿಕ ಸಹಾಯವಾಣಿಗೆ ಕರೆ ಮಾಡಿ.
* ನಾಗರಿಕರು ತಾವೇ ಆನ್‌ಲೈನ್‌ನಲ್ಲಿ ಇ-ಖಾತಾವನ್ನು ರಚಿಸಲು ಪ್ರೋತ್ಸಾಹಿಸಲಾಗುತ್ತದೆ. https://BBMPeAasthi.karnataka.gov.in
Advertisement
ನಾಗರಿಕರು YouTube ತರಬೇತಿ ವೀಡಿಯೊಗಳನ್ನು ನೋಡಬಹುದು:
ಕನ್ನಡ ಭಾಷೆ: https://youtu.be/JR3BxET46po
ಆಂಗ್ಲ ಭಾಷೆ: https://youtu.be/GL8CWsdn3wo
ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳನ್ನು ನಾಗರಿಕರಿಗೆ ಸುಗಮವಾಗಿ ಇ-ಖಾತಾ ನೀಡಲು ವಿಸ್ತರಿಸಲಾಗಿದೆ:
* 1,000 ಕ್ಕೂ ಅಧಿಕ ಹೆಚ್ಚುವರಿ ಕೇಸ್ ವರ್ಕರ್ ಲಾಗಿನ್‌ಗಳನ್ನು ನೀಡಲಾಗಿದೆ.
* 200 ಕ್ಕೂ ಅಧಿಕ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
* ಯಾರಿಂದಾದರೂ ಯಾವುದಾದರೂ ಅನಗತ್ಯ ವಿಳಂಬವಾದಲ್ಲಿ, ಪಾಲಿಕೆಯು ಕ್ರಮ ಕೈಗೊಳ್ಳುತ್ತದೆ ಮತ್ತು ನಾಗರಿಕರು ಬದಲಿ ಸಹಾಯಕ ಕಂದಾಯ ಅಧಿಕಾರಿ/ಕೇಸ್ ವರ್ಕರ್‌ಗಳನ್ನು ಸಹ ಭೇಟಿ ನೀಡಬಹುದಾಗಿರುತ್ತದೆ.