– ಲಿಖಿತ ದೂರು ಬಂದು, ಆರೋಪ ಸಾಬೀತಾದರೆ ಕಠಿಣ ಕ್ರಮ – ಲೋಕಸಭಾ ಸ್ಪೀಕರ್ ಭರವಸೆ
ನವದೆಹಲಿ: ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನ (Parliament Winter Session) ಹಲವು ವಿಷಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರೊಬ್ಬರು ಇ-ಸಿಗರೇಟ್ ಸೇದುತ್ತಿರುವುದನ್ನ ನಾನು ನೋಡಿದೆ. ಆದ್ರೆ ಇ-ಸಿಗರೇಟ್ ದೇಶದಲ್ಲಿ ನಿಷೇಧಿಸಲಾಗಿದೆ ಅನ್ನೋದು ಗಮನಿಸಬೇಕಾದ ಅಂಶ. ಅಂತ ಕಲಾಪ ನಡೆಯುತ್ತಿದ್ದ ವೇಳೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ (Anurag Thakur) ಆರೋಪಿಸಿದರು.
ನಿಷೇಧ ಇದೆಯಾದರೂ, ಲೋಕಸಭೆಯಲ್ಲಿ ಅದನ್ನು ಸೇದಲು ಸ್ಪೀಕರ್ ಪರವಾನಗಿ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ದಯವಿಟ್ಟು ಇದನ್ನು ತಕ್ಷಣವೇ ತನಿಖೆ ಮಾಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಹದಿಹರೆಯದವರಲ್ಲೂ ಹೆಚ್ಚಾಯ್ತು ಇ-ಸಿಗರೇಟ್ ಕ್ರೇಜ್ – WHO ನಿಂದ ಆತಂಕಕಾರಿ ವರದಿ ಬಹಿರಂಗ
Delhi: BJP MP Anurag Thakur says, “I want to raise a question regarding the system. E-cigarettes are banned across the entire country have they been allowed inside Parliament? Some TMC MPs have been sitting and using e-cigarettes for several days. This is a matter concerning the… pic.twitter.com/fQx2JTuz6L
— IANS (@ians_india) December 11, 2025
ನಾನು ಸಂಸದರ ಹೆಸರು ಹೇಳಲು ಇಷ್ಟಪಡುವುದಿಲ್ಲ. ನಾನು ಕೇವಲ ಅವರು ಸೇರಿದ ಪಕ್ಷದ ಹೆಸರನ್ನಷ್ಟೇ ಉಲ್ಲೇಖಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಗದ್ದಲ ಶುರುವಾಗುತ್ತಿದ್ದಂತೇ ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ, ಯಾವುದೇ ಪಕ್ಷದ ಸಂಸದರಿರಲಿ, ಅವರು ಸದನದ ಘನತೆ ಕಾಪಾಡಿಕೊಳ್ಳಬೇಕು. ಒಂದು ವೇಳೆ ಸಂಸದರು ಇ-ಸಿಗರೇಟ್ (E Cigarettes) ಸೇದಿರುವುದು ಸಾಬೀತಾದ್ರೆ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸದನದಲ್ಲಿ ಇ-ಸಿಗರೇಟ್ ಸೇರಿದಂತೆ ಯಾವುದೇ ಹಾನಿಕಾರಕ ವಸ್ತುಗಳನ್ನ ಬಳಸಲು ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಅನುರಾಗ್ ಠಾಕೂರ್ ಅವರ ಈ ಆರೋಪ ಕೆಲಕಾಲ ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಕಲಾಪದಲ್ಲಿ ಇ-ಸಿಗರೇಟ್ ಸೇದಿದವರು ಯಾರು ಎಂಬುದನ್ನು ಅನುರಾಗ್ ಠಾಕೂರ್ ಹೇಳದಿರುವುದು ಕೂಡ ಗದ್ದಲಕ್ಕೆ ಕಾರಣವಾಯಿತು. ಇದನ್ನೂ ಓದಿ: ಲೋಕಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ರಾಜ್ಯ ಸಂಸದರು
ನಾವು ಸಂಸದೀಯ ಸಂಪ್ರದಾಯಗಳು ಮತ್ತು ನಿಯಮಗಳಿಗೆ ಬದ್ಧರಾಗಿರಬೇಕು. ಅಂತಹ ವಿಷಯಗಳು ನನ್ನ ಗಮನಕ್ಕೆ ಬಂದರೆ, ನಾನು ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪೀಕರ್ ಓಂ ಬಿರ್ಲಾ ಭರವಸೆ ನೀಡಿದರು. ಈ ಬಗ್ಗೆ ಅನುರಾಗ್ ಠಾಕೂರ್ ಮತ್ತು ಇತರ ಬಿಜೆಪಿ ಸಂಸದರು ಸ್ಪೀಕರ್ ಅವರಿಗೆ ಲಿಖಿತ ದೂರು ಸಲ್ಲಿಸುವ ನಿರೀಕ್ಷೆ ಇದೆ.
ರಾಜ್ಯಸಭೆಯಲ್ಲೂ ಘರ್ಷಣೆ
ಇನ್ನೂ ರಾಜ್ಯಸಭೆಯಲ್ಲಿ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಸ್ಮರಣಾರ್ಥ ವಿಶೇಷ ಚರ್ಚೆಯು ರಾಜಕೀಯ ಘರ್ಷಣೆಯಾಗಿ ಬದಲಾಯ್ತು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಧ್ಯೆ ವಾಗ್ವಾದವೇ ನಡೀತು. ರಾಷ್ಟ್ರಗೀತೆ ನಿರ್ಧಾರದಲ್ಲೂ ವಂದೇ ಮಾತರಂ ಅನ್ನು ನೆಹರೂ ಬದಿಗಿಟ್ಟಿದ್ದರು ಅಂತ ಜೆಪಿ ನಡ್ಡಾ ಆರೋಪಿಸಿದ್ರು. ಇದನ್ನೂ ಓದಿ: ಭಾರತವಿನ್ನು ಹೈಡ್ರೋಜನ್ ಚಾಲಿತ ರಾಷ್ಟ್ರ – ಗ್ರೀನ್ ಎನರ್ಜಿ ಕಾರು ಚಲಾಯಿಸಿದ ಸಚಿವ ಪ್ರಹ್ಲಾದ್ ಜೋಶಿ
1948ರಲ್ಲಿ ನೆಹರು ಕಳಿಸಿದ್ದ ಲಿಖಿತ ಉತ್ತರವನ್ನು ಉಲ್ಲೇಖಿಸಿ ನಡ್ಡಾ ಆರೋಪಿಸಿದ್ರು. ವಂದೇ ಮಾತರಂನ ದೇಶಭಕ್ತಿಯ ಮಹತ್ವವನ್ನ ಮತ್ತು ಸ್ವಾತಂತ್ರ‍್ಯದ ನಂತರ ಅದನ್ನು ಬದಿಗಿಟ್ಟಿದ್ದಾರೆ ಎಂದು ನಡ್ಡಾ ಪ್ರತಿಪಾದಿಸಿದ್ರು. ಇದಕ್ಕೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್ ನಾಯಕರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ರು. ಸದನದಲ್ಲಿ ಚರ್ಚೆ ಆಗ್ತಿರೋದು ವಂದೇ ಮಾತರಂ ಬಗ್ಗೆಯೋ ಅಥವಾ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಬಗ್ಗೆಯೋ ಎಂದು ಖರ್ಗೆ ಪ್ರಶ್ನಿಸಿದ್ರು.


