ಬೆಂಗಳೂರು: ಆರೋಗ್ಯಕ್ಕೆ ಹಾನಿಕಾರವಾಗಿರುವ ಇ-ಸಿಗರೇಟ್ ಮಾರಾಟ ನಿಷೇಧ ಮಾಡುವಂತೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಯುಜಿಸಿ (ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ಸುತ್ತೋಲೆ ಹೊರಡಿಸಿದೆ. ದೇಶದ ಎಲ್ಲಾ ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳಲ್ಲಿ ಇ-ಸಿಗರೇಟ್ ನಿಷೇಧ ಕಡ್ಡಾಯವಾಗಿ ಮಾಡಬೇಕು ಅಂತ ಆದೇಶ ಹೊರಡಿಸಿದೆ.
ಇತ್ತೀಚೆಗೆ ಇ-ಸಿಗರೇಟ್ ಮಾರಾಟ ಎಲ್ಲಾ ಕಾಲೇಜು, ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳಲ್ಲಿ ಅತಿ ಹೆಚ್ಚು ಆಗುತ್ತಿದೆ. ಪರಿಣಾಮ ಯುವ ಜನತೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಎಚ್ಚೆತ್ತ ಯುಜಿಸಿ ಇ-ಸಿಗರೇಟ್ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಕೂಡ ಇ-ಸಿಗರೇಟ್ ನಿಷೇಧ ಮಾಡಿತ್ತು. ಕೇಂದ್ರ ಸರ್ಕಾರದ ನಿಷೇಧದ ಬಳಿಕ ಯುಜಿಸಿ ಈ ಮಹತ್ವದ ಸುತ್ತೋಲೆ ಹೊರಡಿಸಿದೆ.
Advertisement
Advertisement
ಇ-ಸಿಗರೇಟ್ ನಿಂದಾಗಿ ಹೃದಯ ಹಾಗೂ ಶ್ವಾಸಕೋಶದ ತೊಂದರೆಗಳು ಹೆಚ್ಚಾಗುತ್ತವೆ. ಅಷ್ಟೇ ಅಲ್ಲ ಮೆದುಳಿನ ಹಾನಿಗೂ ಕಾರಣವಾಗುತ್ತದೆ. ಇದರಿಂದ ಜೀವಕ್ಕೆ ಕುತ್ತು ಬರಬಹುದು. ಹೀಗಾಗಿ ಯುವ ಜನತೆ ಜೀವ ಉಳಿಸಲು ಯುಜಿಸಿ ಈ ಮಹತ್ವದ ಆದೇಶ ಹೊರಡಿಸಿದೆ. ಕೇವಲ ನಿಷೇಧವಲ್ಲ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಇ-ಸಿಗರೇಟ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ವಿವಿಗಳು ಮಾಡಬೇಕು ಅಂತ ತಿಳಿಸಿದೆ.
Advertisement