ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ಶಾಂತಕುಮಾರ್ ಅವರನ್ನು ಬಂಧಿಸಲಾಗಿದೆ.
ನೇಮಕಾತಿ ವಿಭಾಗದಲ್ಲಿ ಡಿವೈಎಸ್‌ಪಿಯಾಗಿದ್ದ ಶಾಂತ್‌ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಎರಡು ದಿನಗಳ ಹಿಂದಷ್ಟೆ ನೇಮಕಾತಿ ವಿಭಾಗದಲ್ಲಿ ನಾಲ್ವರು ಅಧಿಕಾರಿಗಳನ್ನು ಸಿಐಡಿ ಬಂಧಿಸಿತ್ತು. ಇದನ್ನೂ ಓದಿ: ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ: ಡಿಕೆಶಿ ಕಾಲೆಳೆದ ಬಿಜೆಪಿ
Advertisement
Advertisement
ಒಒಡಿ ಮೇಲೆ ನೇಮಕಾತಿ ವಿಭಾಗದಲ್ಲಿ ಶಾಂತಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಪಿಐಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆಸಿಕೊಂಡಿದ್ದ ಸಿಐಡಿ, ಶಾಂತಕುಮಾರ್‌ರನ್ನು ಬಂಧಿಸಿದೆ.
Advertisement
ಶಾಂತಕುಮಾರ್ 1996 ರ ಬ್ಯಾಚ್‌ನ CAR ಕಾನ್ಸ್‌ಟೇಬಲ್ ಆಗಿದ್ದರು. ಆಗಲೇ ತಾಂತ್ರಿಕವಾಗಿ ತುಂಬಾ ಚುರುಕಾಗಿದ್ದರು. ಹೀಗಿದ್ದ ಶಾಂತಕುಮಾರ್ 2006 ರಲ್ಲಿ ಆರ್‌ಎಸ್‌ಐ ಎಕ್ಸಾಂ ಬರೆದು ನೇಮಕಗೊಂಡಿದ್ದರು. ಗುಲ್ಬರ್ಗದಲ್ಲಿ ಒಂದು ವರ್ಷ ಆರ್‌ಎಸ್‌ಐ ತರಬೇತಿ ಮುಗಿಸಿ ಬಳಿಕ ಪ್ರೊಬೆಷನರಿ ಅವಧಿಯಲ್ಲಿ ತುಮಕೂರಿನಲ್ಲಿ ಇದ್ದರು. ಇದನ್ನೂ ಓದಿ: ಹಣ ಮಾಡಲು ಸರ್ಕಾರ ನಾಲ್ಕನೇ ಅಲೆ ಬರುತ್ತದೆ ಎನ್ನುತ್ತಿದೆ: ನಲಪಾಡ್
Advertisement
ಅಷ್ಟರಲ್ಲಾಗಲೇ ಪಿಎಸ್‌ಐ ನೇಮಕಾತಿ ವಿಭಾಗಕ್ಕೆ ಹಿರಿಯ ಅಧಿಕಾರಿಗಳು ಈ ಶಾಂತಕುಮಾರ್‌ರನ್ನು ಸೇರಿಸಿಕೊಳ್ಳುತ್ತಾರೆ. 2007-08 ರಿಂದ ನೇಮಕಾತಿ ವಿಭಾಗದಲ್ಲೇ ಶಾಂತಕುಮಾರ್ ಠಿಕಾಣಿ ಹೊಡೆದಿದ್ದರು. ನೇಮಕಾತಿಯಲ್ಲಿ ಏನೇನಾಗುತ್ತೆ ಅನ್ನೋದನ್ನು ತಿಳಿದುಕೊಂಡಿದ್ದರು. ಕಳೆದ 2 ವರ್ಷದ ಹಿಂದೆ ಇನ್ಸ್‌ಪೆಕ್ಟರ್‌ನಿಂದ ಡಿವೈಎಸ್ಪಿ ಆಗಿ ಪ್ರಮೋಷನ್ ಪಡೆದಿದ್ದರು. ಇಡೀ ನೇಮಕಾತಿ ವಿಭಾಗ ಶಾಂತಕುಮಾರ್ ಹಿಡಿತದಲ್ಲಿತ್ತು.
ಒಎಂಆರ್ ತಿದ್ದಲು ಶಾಂತಕುಮಾರ್ ನೆರವಾಗಿದ್ದರು. ಶಾಂತಕುಮಾರ್ ಅಕ್ರಮಕ್ಕೆ ಕೈಜೋಡಿಸಿ ಒಎಂಆರ್ ತಿದ್ದಿಸಿದ್ದಾರೆ. ಈ ಬಗ್ಗೆ ಪುರಾವೆ ಸಂಗ್ರಹಿಸಿದ್ದ ಸಿಐಡಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.