ಒಂದು ದಿನ ರಜೆಗೆ ಡಿವೈಎಸ್‍ಪಿ ಪರದಾಟ – ರೊಚ್ಚಿಗೆದ್ದ ಡಿವೈಎಸ್‍ಪಿಯಿಂದ ಡಿಜಿಐಜಿಪಿಗೆ ಪತ್ರ

Public TV
2 Min Read
DGP LETTER

-ಗಣಪತಿ, ಕಲ್ಲಪ್ಪ ಕೇಸ್ ಬಗ್ಗೆಯೂ ಉಲ್ಲೇಖ!

ಬೆಂಗಳೂರು: ಒಂದು ದಿನ ರಜೆ ಸಿಗದೆ ಡಿವೈಎಸ್‍ಪಿಯವರು ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳ ಹಾಗೂ ತಾರತಮ್ಯದ ಬಗ್ಗೆ ಡಿಜಿಐಜಿಪಿಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಡಿವೈಎಸ್‍ಪಿ ಅವರ ಮಗಳಿಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮಗಳನ್ನು ತರಬೇತಿ ಕ್ಯಾಂಪ್‍ಗೆ ಬಿಟ್ಟು ಬರಲು 1 ದಿನದ ರಜೆಗಾಗಿ 9 ದಿನಗಳ ಮುನ್ನವೇ ರಜೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ರಜೆ ದೊರಕದ ಹಿನ್ನೆಲೆಯಲ್ಲಿ ಮೌಖಿಕವಾಗಿ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಹೋಗಿದ್ದ ಡಿವೈಎಸ್‍ಪಿ. ಆದರೆ ಇದನ್ನು ಅಶಿಸ್ತು ಎಂದು ಪರಿಗಣಿಸಿ ಕಾರಣ ಕೇಳಿ ಅವರಿಗೆ ನೋಟಿಸ್ ನೀಡಲಾಗಿತ್ತು.

state logo

23 ದಿನಗಳ ತರಬೇತಿಯಲ್ಲಿ ಕೇವಲ 1 ದಿನ ಮಾತ್ರ ರಜೆ ಹಾಕಿದ್ದೇನೆ. ಆದರೆ ಮತ್ತೊಬ್ಬ ಅಧಿಕಾರಿ ಅರ್ಜಿ ಸಹ ನೀಡದೆ ರಜೆ ಮೇಲೆ ಹೋಗಿದ್ರು, ಅವರು ಹಿರಿಯ ಅಧಿಕಾರಿ/ಸಲಹೆಗಾರರ ವೈಯಕ್ತಿಕ ಕೆಲಸಕ್ಕೆ ಹೋಗಿದ್ದರು. ಅಲ್ಲದೇ ಇನ್ನೂ ಕೆಲವರಿಗೆ 3-4 ದಿನ ಹೊರಗಡೆ ಹೋಗಲು ಅನುಮತಿ ನೀಡಲಾಗಿತ್ತು. ಆದರೆ ನನಗೆ 1 ದಿನವೂ ರಜೆ ಸಿಕ್ಕಿಲ್ಲ. ಇಲಾಖೆಯ ಈ ತಾರತಮ್ಯ ನೀತಿಯನ್ನು ಪ್ರಶ್ನಿಸಿ ಡಿಜಿ ಐಜಿಪಿಯಾದ ನೀಲಮಣಿ ಎನ್ ರಾಜುರವರರಿಗೆ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಜೊತೆಗೆ ಮೃತ ಡಿವೈಎಸ್‍ಪಿ ಎಂಕೆ ಗಣಪತಿ ವಿಚಾರ ಸಹ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಸೆಪ್ಟೆಂಬರ್ 7ರಂದು ಎಂ.ಕೆ. ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು, ಆದರೆ ಸೆಪ್ಟೆಂಬರ್ 8ರಂದು ಗಣಪತಿ ವಿರುದ್ಧದ ಆರೋಪಕ್ಕೆ ಕ್ಲೀನ್ ಚಿಟ್‍ನ್ನು ಇಲಾಖೆ ನೀಡಿತ್ತು. ಒಂದು ದಿನ ಮುಂಚಿತವಾಗಿ ಕ್ಲೀನ್ ಚಿಟ್ ನೀಡಿದ್ದರೆ ಗಣಪತಿಯವರು ಬದುಕಿರುತ್ತಿದ್ದರು. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಎರಡು ವರ್ಷ ವಾಯ್ತು. ಅಲ್ಲದೇ ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲೂ ಇಲಾಖೆ ಪ್ರಾಮಾಣಿಕ ತನಿಖೆ ನಡೆಸಲಿಲ್ಲ. ಇಲಾಖೆಯಲ್ಲಿನ ಕಿರುಕುಳದಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಬರೆದಿದ್ದಾರೆ.

KALLAPPA Ganapathi

ನೀಲಮಣಿ ಎನ್ ರಾಜು ಡಿಜಿ & ಐಜಿಪಿಯಾಗಿ ಒಂದೂವರೆ ವರ್ಷವಾಯ್ತು ಈವರೆಗೂ ಅಧಿಕಾರಿ-ಸಿಬ್ಬಂದಿಯ ಕುಂದುಕೊರತೆಗಳನ್ನು ಆಲಿಸಿಲ್ಲ. ಅಲ್ಲದೇ ಡಿಜಿ ಐಜಿಪಿ ನೀಲಮಣಿ ರಾಜು ಅವರಿಗೆ ಸರಿಯಾಗಿ ಕನ್ನಡ ಬರುವುದಿಲ್ಲ. ಕನ್ನಡದಲ್ಲಿ ಬರೆದಿರುವ ಪತ್ರವನ್ನ ಓದಿ ಅರಗಿಸಿಕೊಳ್ಳೊದಕ್ಕೆ ಆಗಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಯವಿಟ್ಟು ನೇರವಾಗಿ ಮಾತನಾಡಲಿಕ್ಕೆ ಅವಕಾಶ ಕೊಡಲು ಪತ್ರದಲ್ಲಿ ಮನವಿಮಾಡಿಕೊಂಡಿದ್ದಾರೆ.

ಮೇಲಧಿಕಾರಿಗಳಿಂದ ಆಗುತ್ತಿರುವ ಕಿರುಕುಳದಿಂದ ಬೇಸತ್ತು 2017ರ ಡಿಸೆಂಬರ್‍ನಿಂದ ಈವರೆಗೆ ಒಟ್ಟು ನಾಲ್ಕು ಪತ್ರವನ್ನು ಡಿವೈಎಸ್‍ಪಿಯವರು ಬರೆದಿದ್ದಾರೆ. ಮೇಲಾಧಿಕಾರಿಗಳಿಂದ ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಜೂನ್ 18ರಂದು ಮತ್ತೊಂದು ಪತ್ರವನ್ನು ನೇರವಾಗಿ ಡಿಜಿ ನೀಲಮಣಿಯವರಿಗೆ ಪತ್ರ ಬರೆದು ಭೇಟಿಗೆ ಯತ್ನಿಸಿದ್ದಾರೆ. ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪತ್ರ ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *