ಚೆನ್ನೈ: 2019ರ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ತಂಡವನ್ನು ಎದುರಿಸುತ್ತಿದೆ. ಆದರೆ ಇದೇ ವೇಳೆ ಗಾಯದ ಸಮಸ್ಯೆಯಿಂದ ಡ್ವೇನ್ ಬ್ರಾವೋ ಎರಡು ವಾರಗಳ ಕಾಲ ಐಪಿಎಲ್ ನಿಂದ ಹೊರಬಿದ್ದಿದ್ದಾರೆ.
ಈ ಕುರಿತು ಸಿಎಸ್‍ಕೆ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಸ್ಪಷ್ಟಪಡಿಸಿದ್ದು, ಬ್ರಾವೋ ಮುಂದಿನ ಪಂದ್ಯಕ್ಕೆ ಲಭ್ಯವಾಗುವುದು ತಂಡಕ್ಕೆ ನಷ್ಟವಾಗಿದೆ. ಆದರೆ ಉತ್ತಮ ಕಾಂಬಿನೇಷನ್ ರೂಪಿಸಿ ಬಲಿಷ್ಠ ತಂಡವನ್ನು ಕಣಕ್ಕೆ ಇಳಿಸಲಾಗುವುದು ಎಂದಿದ್ದಾರೆ.
ಬ್ರಾವೋ ಸಿಎಸ್‍ಕೆ ತಂಡದ ಪರ ಪ್ರಮುಖ ಬೌಲರ್ ಆಗಿದ್ದು, ಅದರಲ್ಲೂ ಪಂದ್ಯದ ಡೆತ್ ಓವರ್ ಗಳಲ್ಲಿ ಉತ್ತಮ ದಾಳಿ ನಡೆಸುತ್ತಿದ್ದರು. ಸದ್ಯ ತಂಡ ಬೇರೆ ಆಟಗಾರರ ಬಗ್ಗೆ ಗಮನ ಹರಿಸಬೇಕಿದೆ. ಶರ್ದೂಲ್ ಠಾಕೂರ್, ಮೋಹಿತ್ ಶರ್ಮಾ ಸಿಎಸ್‍ಕೆ ಹೆಚ್ಚಿನ ಬೌಲಿಂಗ್ ಆಯ್ಕೆ ಆಗಿದ್ದಾರೆ.
ಈ ಬಾರಿಯ ಟೂರ್ನಿಯಲ್ಲಿ ಸಿಎಸ್‍ಕೆ ತಂಡ ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ದಕ್ಷಿಣ ಆಫ್ರಿಕಾದ ಲುಂಗಿ ಎನ್ಗಿ, ನ್ಯೂಜಿಲೆಂಡ್ ತಂಡದ ಡೇವಿಡ್ ವಿಲ್ಲೆ ವೈಯಕ್ತಿಕ ಕಾರಣಗಳಿಂದ ಟೂರ್ನಿಯ ಆರಂಭದಲ್ಲೇ ಹಿಂದೆ ಸರಿದಿದ್ದರು.