ಮುಂಬೈ: ವೆಸ್ಟ್ ಇಂಡೀಸ್ ತಂಡದ ಅಲ್‍ರೌಂಡರ್ ಬ್ರಾವೋ ತಮ್ಮ 14 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದು, ಕೇವಲ ಫ್ರಾಂಚೈಸಿ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.
2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಬ್ರಾವೋ ಇದುವರೆಗೂ 40 ಟೆಸ್ಟ್, 164 ಏಕದಿನ ಹಾಗೂ 66 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
Advertisement
Dwayne Bravo announces international retirement!
He wants to 'leave the international arena for the next generation of players' and 'preserve my longevity as a professional cricketer'.
➡️ https://t.co/ThaYHkfdWB pic.twitter.com/QOqgVX7yRp
— ICC (@ICC) October 25, 2018
Advertisement
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬ್ರಾವೋ, ಇಂದು ನಾನು ಅಂತರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸುತ್ತಿದ್ದೇನೆ. ಆದರೆ ಇಂದಿಗೂ ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪಡೆದ ಟೆಸ್ಟ್ ಕ್ಯಾಪ್ ಘಟನೆ ಈಗಲೂ ನೆನಪಿದೆ. ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ಆಟದ ಮೇಲಿನ ಫ್ಯಾಷನ್ ಹಾಗೂ ಉತ್ಸಾಹವನ್ನು ಉಳಿಸಿಕೊಂಡು ಬಂದಿದ್ದು, ಸದ್ಯ ನಾನು ವಿದಾಯ ಘೋಷಣೆ ಮಾಡುತ್ತಿರುವುದಾಗಿ ತಿಳಿಸಿದರು.
Advertisement
ನನ್ನ ಜೀವನದ ಯಶಸ್ವಿಗೆ ಹಲವು ಮಂದಿ ಸಹಕಾರ ನೀಡಿದ್ದಾರೆ. ಅದರಲ್ಲೂ ನನ್ನ ಕುಟುಂಬ, ಕ್ರಿಕೆಟ್ ತರಬೇತಿ ನೀಡಿದ ಕ್ಯೂಪಿಸಿಸಿ ಸಂಸ್ಥೆ, ಅಲ್ಲದೇ ಅಭಿಮಾನಿಗಳು ಕೂಡ ನನ್ನ ಯಶಸ್ಸಿಗೆ ಕಾರಣರಾಗಿದ್ದಾರೆ. ಹಲವು ಲೆಜೆಂಡ್ ಆಟಗಾರರೊಂದಿಗೆ ಕ್ರಿಕೆಟ್ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಅನುಭವ ಸ್ಮರಣಿಯ. ಅದ್ದರಿಂದ ವಿಶ್ವಾದ್ಯಂತ ನಡೆಯುವ ಟೂರ್ನಿಗಳಲ್ಲಿ ಭಾಗವಹಿಸುವ ಮೂಲಕ ನನ್ನ ಕ್ರಿಕೆಟ್ ಅನ್ನು ಮುಂದುವರಿಸುತ್ತೇನೆ ಎಂದರು.
Advertisement
https://twitter.com/DHONIism/status/1048786997085491200
ಕಳೆದ ಎರಡು ವರ್ಷಗಳ ಹಿಂದೆ ದುಬೈನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಟಿ20 ಪಂದ್ಯದಲ್ಲಿ ಕೊನೆಯ ಬಾರಿ ಬ್ರಾವೋ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಉಳಿದಂತೆ 2014ರ ಅಕ್ಟೋಬರ್ ನಲ್ಲಿ ನಡೆದ ಏಕದಿನ ಹಾಗೂ 2010 ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಕೇವಲ ಅಲ್‍ರೌಂಡರ್ ಮಾತ್ರವಲ್ಲದೇ ಬ್ರಾವೋ ಭಾರತದ ಪ್ರವಾಸದಲ್ಲಿ ವಿಂಡೀಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ಈ ಸರಣಿಯಲ್ಲಿ ವಿಂಡೀಸ್ ಕ್ರಿಕೆಟ್ ಸಂಸ್ಥೆಯೊಂದಿಗೆ ಉಂಟಾದ ಮನಸ್ತಾಪದಿಂದ ಟೂರ್ನಿಯಿಂದ ಅರ್ಧದಲ್ಲೇ ವಾಪಸ್ ತೆರಳಿದ್ದನ್ನು ನೆನೆಯಬಹುದಾಗಿದೆ. ಇದನ್ನು ಓದಿ: ಗೆಲುವಿನ ಸಂಭ್ರಮಾಚರಣೆ ಮುಂದುವರಿಸಿದ ಸಿಎಸ್‍ಕೆ – ಬ್ರಾವೋ ಹೊಸ ಹಾಡು ವೈರಲ್
ಬ್ರಾವೋ ತಮ್ಮ ವೃತ್ತಿ ಜೀವನದ ಟೆಸ್ಟ್ ಕ್ರಿಕೆಟ್‍ನಲ್ಲಿ 2,200 ರನ್, 86 ವಿಕೆಟ್, ಏಕದಿನ ಮಾದರಿಯಲ್ಲಿ 2,968 ರನ್, 199 ವಿಕೆಟ್ ಮತ್ತು ಟಿ20ಯಲ್ಲಿ 1,142 ರನ್ 52 ವಿಕೆಟ್ ಪಡೆದು ಆಲ್‍ರೌಂಡರ್ ಆಗಿ ಮಿಂಚಿದ್ದಾರೆ. ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭಾಗವಹಿಸಿದ್ದು, 2008 ರಿಂದ ಸತತವಾಗಿ ಚೆನ್ನೈ ತಂಡದ ಪರ ಆಡಿದ್ದರು. ಇದೂವರೆಗೂ ಐಪಿಎಲ್ ನಲ್ಲಿ 122 ಪಂದ್ಯಗಳನ್ನಾಡಿರುವ ಬ್ರಾವೋ 1,379 ರನ್ 136 ವಿಕೆಟ್ ಪಡೆದಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೇ ಬ್ರಾವೋ ಅದ್ಭುತ ಸಿಂಗರ್ ಕೂಡ ಆಗಿದ್ದು, ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ ಸಿಎಸ್‍ಕೆ ಪ್ರಚಾರಕ್ಕಾಗಿ ತಮ್ಮದೇ ಬ್ಯಾಂಡ್ ಮೂಲಕ ಹಾಡನ್ನು ಬಿಡುಗಡೆ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv