ಮುಂಬೈ: ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಆಲ್‍ರೌಂಡರ್ ಡ್ವೇನ್ ಬ್ರಾವೋ ಇದೀಗ ಟಿ20 ಕ್ರಿಕೆಟ್‍ನಲ್ಲಿ 600 ವಿಕೆಟ್ ಪಡೆದ ಮೊಟ್ಟ ಮೊದಲ ಆಟಗಾರನಾಗಿ ವಿಶ್ವದಾಖಲೆ ಬರೆದಿದ್ದಾರೆ.
Advertisement
ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಇತರ ದೇಶಗಳಲ್ಲಿ ನಡೆಯುವ ಫ್ರಾಂಚೈಸಿ ಟಿ20 ಲೀಗ್‍ನಲ್ಲಿ ಆಡುತ್ತಿದ್ದಾರೆ. ಇದೀಗ ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಮೆನ್ಸ್ 100 ಟೂರ್ನಿಯಲ್ಲಿ ಆಡುತ್ತಿರುವ ಬ್ರಾವೋ ಬೌಲಿಂಗ್‍ನಲ್ಲಿ 600 ವಿಕೆಟ್ ಪಡೆದು ವಿಶ್ವದಾಖಲೆ ಬರೆದಿದ್ದಾರೆ. ಇದರೊಂದಿಗೆ ಬ್ರಾವೋ ಟಿ20 ಕ್ರಿಕೆಟ್‍ನಲ್ಲಿ 600 ವಿಕೆಟ್ ಪಡೆದ ಮೊದಲ ಆಟಗಾರರಾದರೆ, ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ 466 ವಿಕೆಟ್ ಪಡೆದು ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಚಿನ್ನದ ಹುಡುಗಿಯ ಪರಿಸರ ಪ್ರೀತಿ – ಹುಟ್ಟುಹಬ್ಬಕ್ಕೆ ಗಿಡ ನೆಟ್ಟ ಮೀರಾಬಾಯಿ ಚಾನು
Advertisement
Advertisement
ಬ್ರಾವೋ ವಿಶ್ವದ 25ಕ್ಕೂ ಹೆಚ್ಚು ಫ್ರಾಂಚೈಸ್ ಲೀಗ್‍ಗಳಲ್ಲಿ ಆಡಿದ್ದು, ಈವರೆಗೆ 522 ವಿಕೆಟ್ ಕಿತ್ತಿದ್ದಾರೆ. 2006ರಲ್ಲಿ ನ್ಯೂಜಿಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಪರ ಡೆಬ್ಯೂ ಪಂದ್ಯವಾಡಿದ ಬ್ರಾವೋ ಈವರೆಗೆ 91 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 78 ವಿಕೆಟ್ ಪಡೆದಿದ್ದಾರೆ. ಈ ಮೂಲಕ ರಾಷ್ಟ್ರೀಯ ತಂಡಕ್ಕಿಂತಲು ಇತರ ಫ್ರಾಂಚೈಸ್ ಲೀಗ್‍ನಲ್ಲಿ ಬ್ರಾವೋ ಮಿಂಚುಹರಿಸಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್‌ಗೆ ತೆರಳಿದ್ದ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆ – PBF
Advertisement
Presenting you all the 1st cricketer to complete 600 wickets in T20 cricket ????????#WhistlePodu #DJBravo @DJBravo47
???? @ChennaiIPL pic.twitter.com/dpm7KbKvVZ
— WhistlePodu Army ® – CSK Fan Club (@CSKFansOfficial) August 11, 2022
ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಈವರೆಗೆ ಐಪಿಎಲ್‍ನಲ್ಲಿ 161 ಪಂದ್ಯಗಳಿಂದ 183 ವಿಕೆಟ್ ಪಡೆದು ಐಪಿಎಲ್‍ನಲ್ಲೂ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.