ಬೆಂಗಳೂರು: ರಾಜಕೀಯದಲ್ಲಿ ಇಲ್ಲದಿದ್ದರೂ ಸುಮಲತಾ ಅಂಬರೀಶ್ ಅವರ ಪ್ರಬುದ್ಧತೆಯನ್ನು ಜೆಡಿಎಸ್‍ನವರು ನೋಡಿ ಕಲಿಯಬೇಕು ಎಂದು ಕೇಂದ್ರ ಸಚಿವ ಸದಾನಂದಗೌಡ ಮಂಡ್ಯ ಸಂಸದೆಯನ್ನು ಹಾಡಿ ಹೊಗಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸದಾನಂದಗೌಡ ಅವರು, ಸಂಪುಟ ವಿಸ್ತರಣೆ ಸರ್ಕಾರ ಬೀಳಲು ಅಡಿಗಲ್ಲು. ಅವರವರು ಜಗಳ ಮಾಡಿಕೊಳ್ಳುತ್ತಿದ್ದು, ಸರ್ಕಾರ ಉಳಿಸಲು ಹೋಗುವ ಸಾಹಸವೇ ಅವರನ್ನು ಮುಳುಗಿಸುತ್ತದೆ. ಒಂದು ಕಡೆ ಬರಗಾಲ ನೀರಿಲ್ಲ, ಕ್ಷೇತ್ರ ಪರ್ಯಟನೆ ಮಾಡಿದಾಗ ಇದರ ಅರಿವಾಗುತ್ತದೆ. ರಾಜ್ಯ ಸರ್ಕಾರ ಈ ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಇವರಿಂದಾಗಿ ಬಡವರ ಜೀವನ ದುಸ್ತರವಾಗುತ್ತಿದೆ. ಕ್ಷೇತ್ರಕ್ಕೆ ಸಂಬಂಧಪಟ್ಟವರು ಅದ್ಯಾರ ಮನೆಯಲ್ಲಿ ಕೂತಿದ್ದಾರೋ ಗೊತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜನರು ಅವರನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಯಾವ ಪಕ್ಷಕ್ಕೂ ಸೇರಿ ಯಾರ ಬಳಿಯೂ ಭಿಕ್ಷೆ ಬೇಡಲ್ಲ ಎಂದು ಸುಮಲತಾ ಹೇಳಿದ್ದಾರೆ. ಇದನ್ನು ನೋಡಿ ಜೆಡಿಎಸ್ ಅವರು ಕಲಿಯಬೇಕು. ಜೆಡಿಎಸ್ ಈ ಜನ್ಮ ಪೂರ್ತಿ ಸುಮಲತಾ ಅವರಿಂದ ಕಲಿಯಲು ಸಾಧ್ಯವಿಲ್ಲ. ಆದರೆ ಸ್ವಲ್ಪನಾದರೂ ಬುದ್ಧಿ ಕಲಿಯಿರಿ. ಮಂಡ್ಯದಲ್ಲಿ ಜನರು ಕಪಾಳಮೋಕ್ಷ ಮಾಡಿದರೂ ಬುದ್ಧಿ ಬಂದಿಲ್ಲ ಎಂದು ಮೈತ್ರಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
Advertisement
ನಿಖಿಲ್ ಕುಮಾರಸ್ವಾಮಿ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಕಾರ್ಯಕರ್ತರಿಗೆ ಹೇಳಿದ್ದರು. ಇದೀಗ ನಿಖಿಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಖಿಲ್ ಇಷ್ಟು ದೊಡ್ಡ ರಾಜಕಾರಣಿ ಆದರಲ್ಲ ನನಗೆ ಆಶ್ಚರ್ಯವಾಗುತ್ತದೆ. ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದವರು ನಿಖಿಲ್. ಸಿನಿಮಾದಲ್ಲಿ ರಾಜಕಾರಾಣ ಮಾಡಿರಬಹುದು. ಆದರೆ ರಾಜಕಾರಣವನ್ನು ಸಿನಿಮಾ ರೀತಿ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಎಷ್ಟು ಹೊಲಸು ಎನ್ನೋದಕ್ಕೆ ನಿಖಿಲ್ ಹೇಳಿಕೆಯೇ ಸಾಕ್ಷಿಯಾಗಿದೆ. ಸಿನಿಮಾ ರಂಗದಿಂದ ಬಂದವರ ಬಾಯಲ್ಲಿ ಈ ಮಾತು ಎಂದು ಸದಾನಂದ ಗೌಡರು ನಿಖಿಲ್ ಬಗ್ಗೆ ವ್ಯಂಗ್ಯವಾಡಿದರು.