ಬೆಂಗಳೂರು: ಈಶ್ವರಪ್ಪನವರು (KS Eshwarappa) ನಮ್ಮ ಪಕ್ಷದಲ್ಲಿ ಸ್ವಲ್ಪ ಉಗ್ರವಾದಿ. ಯಾವುದೇ ವಿಚಾರ ಬಂದಾಗ ಆಕ್ರೋಶಭರಿತರಾದ್ರೆ ಏನಾದರೂ ಮಾತನಾಡಿಬಿಡ್ತಾರೆ. ಹಾಗೇಯೇ ಬಾಯಿತಪ್ಪಿ ಹೇಳಿರಬಹುದು ಎಂದು ನಾನು ಭಾವಿಸುತ್ತೇನೆ. ಆದ್ರೆ ಒಬ್ಬ ಹಿರಿಯ ರಾಜಕಾರಣಿಯಾಗಿ ಹಾಗೆ ಹೇಳಬಾರದಿತ್ತು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ (DV Sadananda Gowda) ಹೇಳಿದ್ದಾರೆ.
ʻದೇಶದ್ರೋಹ ಹೇಳಿಕೆ ನೀಡುವವರನ್ನು ಗುಂಡಿಕ್ಕಿಕೊಲ್ಲುವ ಕಾನೂನು (Law) ತನ್ನಿʼ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರು ಹಾಗೆ ಹೇಳಬಾರದಿತ್ತು. ಸ್ವಲ್ಪ ವ್ಯತ್ಯಾಸವಾಗಿದೆ. ಆದ್ರೆ ಅವರು ಗುಂಡು ಹಾರಿಸುವಷ್ಟು ಉಗ್ರರಲ್ಲ. ದೇಶ ವಿಭಜನೆ ಬಂದಾಗ ಕ್ರೋದ ಬರುತ್ತದೆ. ಆದ್ದರಿಂದ ಉದ್ವೇಗದಲ್ಲಿ ಮಾತನಾಡಿದ್ದಾರೆ. ಇದನ್ನು ಡಿ.ಕೆ ಸುರೇಶ್ ಅವರು ಬಿಡಬೇಕು. ಅದೇ ರೀತಿ ಏನೂ ಸಿಗದೇ ಇದ್ದಾಗ ಈ ರೀತಿ ಹಿಡಿದುಕೊಂಡು ನೇತಾಡುವುದನ್ನು ಬಿಡಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದಿದ್ದಾರೆ. ಈ ಕುರಿತ ವೀಡಿಯೋ ಇಲ್ಲಿದೆ… ಇದನ್ನೂ ಓದಿ: ಧರ್ಮದ ಕವಚದ ಒಳಗೆ ಪಾಪ, ಅನ್ಯಾಯದ ಕೆಲಸ ಬಿಜೆಪಿ ಮಾಡುತ್ತಿದೆ: ದಿನೇಶ್ ಗುಂಡೂರಾವ್