ಬೆಂಗಳೂರು: ಇಲ್ಲಿನ ಉತ್ತರ ಲೋಕಸಭಾ ಕ್ಷೇತ್ರಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಂದರೆ ಸ್ವಾಗತ ಮಾಡ್ತೀನಿ. ಸುಮಲತಾ ಸೇರಿದಂತೆ ಯಾರೇ ಬೆಂಗಳೂರು ಉತ್ತರದ ಅಭ್ಯರ್ಥಿಯಾದರೂ ಅವರ ಪರ ಸಂತೋಷವಾಗಿ ಕೆಲಸ ಮಾಡ್ತೀನಿ ಅಂತ ಮಾಜಿ ಸಿಎಂ, ಸಂಸದ ಸದಾನಂದಗೌಡ (DV Sadananda Gowda) ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ರಾಜಕೀಯ ನಿವೃತ್ತಿ ಕುರಿತು ʻಪಬ್ಲಿಕ್ ಟಿವಿʼ (Public TV) ಜೊತೆ ಮಾತಾನಾಡಿದ ಅವರು, ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುವ ನಿರ್ಧಾರ ನನ್ನ ಸ್ವಂತ ನಿರ್ಧಾರ ಯಾರು ನನ್ನ ಮೇಲೆ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ನನ್ನ ಚುನಾವಣೆ (Elections) ರಾಜಕೀಯ ನಿವೃತ್ತಿ ನಿರ್ಧಾರ ದಿಢೀರ್ ನಿರ್ಧಾರ ಅಲ್ಲ. ಕಳೆದ ಚುನಾವಣೆಯಲ್ಲಿಯೇ ನಿವೃತ್ತಿ ಘೋಷಣೆ ಮಾಡಿದ್ದೆ. ಅದರಂತೆ ಪಕ್ಷಕ್ಕಾಗಿ ನಿವೃತ್ತಿ ಘೋಷಣೆ ಮಾಡಿದ್ದೇನೆ. ಯುವಕರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ನಿವೃತ್ತಿ ಘೋಷಣೆ ಮಾಡಿದ್ದೇನೆ. ಇನ್ಮುಂದೆ ಪಕ್ಷದ ಕೆಲಸ ಮಾಡಿಕೊಂಡು ಇರುತ್ತೇನೆ ಎಂದರು.
Advertisement
ಕೇಂದ್ರದ ವರಿಷ್ಠರ ಮೇಲೆ ಕೋಪಕ್ಕೆ ನಿವೃತ್ತಿ ಘೋಷಣೆ ನಿರ್ಧಾರ ಮಾಡಿಲ್ಲ. ಯಾರು ನಿವೃತ್ತಿ ಘೋಷಣೆ ಮಾಡಿ ಅಂತ ನನ್ನ ಮೇಲೆ ಒತ್ತಡ ಹಾಕಿಲ್ಲ. ಇದು ನನ್ನ ಸ್ವತಂತ್ರ ನಿರ್ಧಾರ. ಮತ್ತೆ ಹೈಕಮಾಂಡ್ ಸ್ಪರ್ಧೆ ಮಾಡಿ ಅಂದರೂ ನಾನು ಮಾಡಲ್ಲ. ನನ್ನ ನಿರ್ಧಾರ ವಾಪಸ್ ಪಡೆಯೊಲ್ಲ ಎಂದು ಹೇಳಿದರು. ಇದನ್ನೂ ಓದಿ: ವಿಶ್ವಕಪ್ ಪವರ್ ಪ್ಲೇನಲ್ಲಿ ವಿಶೇಷ ಸಾಧನೆ ನಿರ್ಮಿಸಿದ ರೋಹಿತ್ ಶರ್ಮಾ
Advertisement
ವರಿಷ್ಠರು ರಾಜ್ಯಾಧ್ಯಕ್ಷ, ವಿಪಕ್ಷ ಸ್ಥಾನ ಆಯ್ಕೆ ಮಾಡಬೇಕಿತ್ತು. ಕೇಂದ್ರದ ನಾಯಕರು ಇದನ್ನ ಮಾಡಿಲ್ಲ ಅನ್ನೋ ನೋವಿದೆ ಅಂತ ವರಿಷ್ಠರ ಮೇಲೆ ಅಸಮಾಧಾನ ಮುಂದುವರೆಸಿದರು. ಇನ್ನೂ ಖಾಲಿ ಆಗೋ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಂದರೆ ಸ್ವಾಗತ ಮಾಡ್ತೀನಿ. ಸುಮಲತಾ ಸೇರಿದಂತೆ ಯಾರೇ ಬೆಂಗಳೂರು ಉತ್ತರದ ಅಭ್ಯರ್ಥಿ ಆದರೂ ಅವರ ಪರ ಸಂತೋಷವಾಗಿ ಕೆಲಸ ಮಾಡ್ತೀನಿ ಅಂತ ತಿಳಿಸಿದರು. ಇದನ್ನೂ ಓದಿ: ಪಾಕ್ ಮುಂದಿರುವ ಘೋರ ಸವಾಲು ಯಾವುದು? – ಎಷ್ಟು ರನ್ ಅಂತರದಲ್ಲಿ ಗೆದ್ದರೆ ಸೆಮಿಸ್ ತಲುಪಬಹುದು?
ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಯಾವತ್ತು ಹೋಗಲ್ಲ. ಬಿಜೆಪಿಯವರು ಏನಾದರು ನನ್ನನ್ನ ಪಕ್ಷದಿಂದ ತೆಗೆದು ಹಾಕಿದ್ರೆ ಮುಂದೆ ನೋಡೋಣ. ರಾಜಕೀಯ ಬಿಟ್ಟು ಬೇಕಾದ್ರೆ ಇರುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರೋದಿಲ್ಲ ಎಂದು ಶಪಥ ಮಾಡಿದ್ರು.