ಚಿಕ್ಕಬಳ್ಳಾಪುರ: ಬಿಜೆಪಿಯದ್ದು ತಾಲಿಬಾನ್ ಸಂಸ್ಕೃತಿ ಅಂತ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ಸದಾನಂದಗೌಡ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಪೂರ್ತಿ ತಲೆ ಕೆಟ್ಟಿದೆ. ರಾಜಕಾರಣದಲ್ಲಿ ಸ್ವಲ್ಪ ಕೆಟ್ಟರು ಪರವಾಗಿಲ್ಲ. ಬಿಜೆಪಿಯವರು ತಾಲಿಬಾನ್‍ಗಳು ಆಗಿದ್ದರೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕಾರಿನಲ್ಲಿ ಓಡಾಡಲು ಸಾಧ್ಯವಾಗುತ್ತಿತ್ತೇ? ಅವರ ಕಾಲಿಗೆ ಹಗ್ಗ ಕಟ್ಟಿ ಬೀದಿಯಲ್ಲಿ ಎಳೆದಾಡಿಕೊಂಡು ಹೋಗುತ್ತಿದ್ದರು ಅಂತ ಖಾರವಾಗಿ ಸಿದ್ದರಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೊಲ್ಲಹಳ್ಳಿಯ ಬಳಿ ಶ್ರೀ ದೊಡ್ಡಬಸವರಾಜು ಮತ್ತು ಶ್ರೀ ತಮ್ಮೇಗೌಡ ಹಾಗೂ ಅವರ ತಂಡದವರು ‘ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ’ಯಡಿ ಬಯಲುಸೀಮೆ ಪ್ರದೇಶದಲ್ಲಿ ಪ್ರಥಮವಾಗಿ ಸೀಗಡಿ ಕೃಷಿ ಮಾಡಿದ್ದು, ಬೆಳೆಯ ಕೊಯ್ಲು ಮತ್ತು ಮಾರಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, 1/2 pic.twitter.com/LjiRrBo5Qs
— Sadananda Gowda (@DVSadanandGowda) September 29, 2021
ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಬಳಿ ಸಿರಿ ಅಕ್ವಾ ಕಲ್ಚರ್ ಫಾರಂಗೆ ಭೇಟಿ ನೀಡಿ ಮಾತನಾಡಿ ಅವರು, ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ಬಾಯಿಗೆ ಬಂದ ಹಾಗೆ ಮಾತನಾಡಬಾರದು. ಬಿಜೆಪಿಯವರ ಪ್ಯಾಂಟ್ ಲೂಸ್ ಆಗಿದೆ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರದ್ದು ಏನೇನೋ ಲೂಸ್ ಆಗಿದಿಯೋ ನನಗೆ ಗೊತ್ತಿಲ್ಲ, ಆದರೆ ಸಿದ್ದರಾಮಯ್ಯನವರ ತಲೆ ಮಾತ್ರ ಲೂಸ್ ಆಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
Participated in launch of prawn cultivation and sale at a programme at Siri Aquaculture near Gollahalli Gate, Chikkaballapur, today. Sri Doddabasavaraju and Sri Thammegowda have cultivated prawns in the region for the first time, under Pradhan Mantri Matsya Sampada Yojana. 1/2 pic.twitter.com/osPyXkPJPM
— Sadananda Gowda (@DVSadanandGowda) September 29, 2021
ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‍ನವರಿಗೆ ಅಹಿಂದ ಹೋರಾಟ ಮಾಡ್ತಾರೆ. ಬಾಯಿಗೆ ಬಂದ ಹಾಗೆ ಮಾತಾಡೋದು ಅವರ ಯೋಜನೆಗಳನ್ನ ಕಾರ್ಯಗತ ಮಾಡಲು ಮುಂದಾಗುತ್ತಾರೆ ಅಂತ ಆಕ್ರೋಶದ ನುಡಿಗಳನ್ನ ವ್ಯಕ್ತಪಡಿಸಿದರು.
ಇದೇ ವೇಳೆ ಜೊತೆಯಲ್ಲಿದ್ದ ಮೀನುಗಾರಿಕಾ ಸಚಿವ ಅಂಗಾರ ಕೂಡ ಸಿದ್ದರಾಮಯ್ಯನವರೇ ಕೆಟ್ಟು ಹೋಗಿದ್ದಾರೆ. ಅವರ ಕೆಟ್ಟು ಹೋದ ಕಾರಣ ಕೆಟ್ಟ ಸಂಸ್ಕೃತಿ ಅವರಲ್ಲಿದೆ. ನಾವು ತಲೆಕೆಡೆಸಿಕೊಳ್ಳುವುದಿಲ್ಲ, ಮತಾಂತರಕ್ಕೆ ನಮ್ಮ ಸರ್ಕಾರ ಆಸ್ಪದ ಕೊಡುವುದಿಲ್ಲ ಎಂದರು.