ಬೆಂಗಳೂರು: ಜಮೀರ್ ಪಾಕಿಸ್ತಾನಕ್ಕೆ ಹೋಗಿ ಸೂಸೈಡ್ ಬಾಂಬರ್ ಆಗುವುದು ಬೇಡ. ತಮ್ಮ ಕ್ಷೇತ್ರದಲ್ಲಿ ಸೂಸೈಡ್ ಬಾಂಬರ್ ಆಗಿ ಆತ್ಮಾಹುತಿ ಮಾಡಿಕೊಳ್ಳಲಿ ಎಂದು ಸಚಿವ ಜಮೀರ್ ಅಹ್ಮದ್ (Zameer Ahmed) ವಿರುದ್ಧ ಮಾಜಿ ಸಿಎಂ ಸದಾನಂದಗೌಡ (Sadanand Gowda) ಅವರು ಕಿಡಿಕಾರಿದ್ದಾರೆ.ಇದನ್ನೂ ಓದಿ: ಜಮೀರ್ ಸುಮ್ಮನಿದ್ರೆ ಅದೇ ದೊಡ್ಡ ಸೇವೆ: ಜೋಶಿ
ಪ್ರಧಾನಿ ಮೋದಿ, ಅಮಿತ್ ಶಾ ಅವಕಾಶ ಕೊಟ್ಟರೆ ಸೂಸೈಡ್ ಬಾಂಬ್ ಹಾಕಿಕೊಂಡು ಪಾಕಿಸ್ತಾನಕ್ಕೆ ಹೋಗುತ್ತೇನೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಭಾಗದಲ್ಲಿ ಯಕ್ಷಗಾನಕ್ಕೆ ಮೊದಲು ಒಬ್ಬ ಹಾಸ್ಯಗಾರ ಬರುತ್ತಾರೆ. ಜನರನ್ನು ರಂಜಿಸಲು ಅವರು ಬರುತ್ತಾರೆ. ಆ ಹಾಸ್ಯಗಾರರಿಗಿಂತ ಕೆಳಗೆ ಇರುವವರು ಈ ಜಮೀರ್ ಎಂದು ವ್ಯಂಗ್ಯ ನುಡಿದಿದ್ದಾರೆ.
ಅವರು ಪಾಕಿಸ್ತಾನಕ್ಕೆ ಹೋಗಿ ಬಾಂಬ್ ಹಾಕಬೇಕಿಲ್ಲ. ಅವರ ಕ್ಷೇತ್ರದಲ್ಲಿ ಅವರು ಆತ್ಮಾಹುತಿ ಬಾಂಬರ್ ಆಗಲಿ. ಜಮೀರ್ ಪಾಕಿಸ್ತಾನದ ವಿರುದ್ಧ ಆತ್ಮಾಹುತಿ ಬಾಂಬರ್ ಆದರು ಎಂದು ಜಗತ್ತಿಗೆ ಒಂದು ಸಂದೇಶ ಹೋಗಲಿ. ಸುಮ್ಮನೆ ಮನರಂಜನೆಗೆ ಮಾತನಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಸುಹಾಸ್ ಹತ್ಯೆ ಕೇಸ್ – ಫಾಝಿಲ್ ಸಹೋದರನೇ ಪ್ರಮುಖ ಆರೋಪಿ