ಆಮ್ಸ್ಟರ್ಡ್ಯಾಮ್: ನೈಟ್ರೋಜನ್ ಆಕ್ಸೈಡ್‍ನಂತಹ ಮಾಲಿನ್ಯಕಾರಕಗಳ ಹೊರಸೂಸುವಿಕೆಯನ್ನು ಕಡಿತಗೊಳಿಸುವಂತೆ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಡಚ್ ಪೊಲೀಸರು ಟ್ರಾಕ್ಟರ್‌ನಲ್ಲಿದ್ದ 16 ವರ್ಷದ ಹುಡುಗನ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ಉತ್ತರ ನೆದರ್‌ಲ್ಯಾಂಡ್ಸ್‌ನಲ್ಲಿ ಮೂವರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಉತ್ತರ ಫ್ರೈಸ್‍ಲ್ಯಾಂಡ್‍ನ ಪೊಲೀಸರು, ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಆದರೆ ಪೊಲೀಸ್ ವಾಹನ ಧ್ವಂಸಗೊಳಿಸಲು ಪ್ರಯತ್ನಿಸಿದ ಟ್ರಾಕ್ಟರ್ ಚಾಲಕನಿಗೆ ಎಚ್ಚರಿಕೆ ನೀಡುವ ಸಲುವಾಗಿ ಗುಂಡು ಹಾರಿಸಲಾಯಿತು ಎಂದಿದ್ದಾರೆ. ಸದ್ಯ ಘಟನೆ ಸಂಬಂಧ ತನಿಖೆ ನಡೆಸಲಾಸಲಾಗುತ್ತಿದೆ ಎಂದು ರಾಷ್ಟ್ರೀಯ ಅಪರಾಧ ತನಿಖಾ ಸೇವೆ ತಿಳಿಸಿದೆ. ಇದನ್ನೂ ಓದಿ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೋತಬಯ ರಾಜಪಕ್ಸೆ
Advertisement
Advertisement
ಸಾರಜನಕ ಹೊರಸೂಸುವಿಕೆಯನ್ನು ಕಡಿತಗೊಳಿಸುವ ವಿಚಾರವಾಗಿ ಹೊಸ ಸರ್ಕಾರದ ಯೋಜನೆಗಳ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದಾರೆ. ಇದರಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಅರಿವಿಲ್ಲದೇ 20 ವರ್ಷದಿಂದ ಮುಟ್ಟಾಗ್ತಿದ್ದಾನೆ ಈ ವ್ಯಕ್ತಿ – ಸ್ತ್ರಿಯರಂತೆ ಈತನಿಗೂ ಇದೆ ಗರ್ಭಾಶಯ