ಆಮ್ಸ್ಟರ್ಡ್ಯಾಮ್: ಇಸ್ಲಾಂ ವಿರೋಧಿ ನಿಲುವುಗಳಿಗೆ ಹೆಸರುವಾಸಿಯಾಗಿದ್ದ ಡಚ್ ಬಲಪಂಥೀಯ ನಾಯಕ ಗೀರ್ಟ್ ವೈಲ್ಡರ್ಸ್ (Geert Wilders) ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ.
I sent a personal message of support to the brave Nupur Sharma, who is threatened by Islamists for years now only for speaking the truth. Freedom loving people all over the world should support her. I hope to meet her one day while visiting India. #NupurSharma
— Geert Wilders (@geertwilderspvv) February 17, 2024
Advertisement
ಪ್ರವಾದಿ ಮೊಹಮ್ಮದ್ ಪೈಗಂಬರ್ (Prophet Mohammed) ಅವರ ಕುರಿತು ಅವಹೇಳಕಾರಿ ಹೇಳಿಕೆ ನೀಡಿ, ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನೂಪುರ್ ಶರ್ಮಾ (Nupur Sharma) ಬೆಂಬಲಿಸಿ ಎಕ್ಸ್ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಖವಾಣಿ; ಕೇರಳದ ʻಜೈಹಿಂದ್ ಟಿವಿʼ ಚಾನೆಲ್ ಬ್ಯಾಂಕ್ ಖಾತೆಗಳು ಫ್ರೀಜ್!
Advertisement
Advertisement
ಧೈರ್ಯಶಾಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ವೈಯಕ್ತಿಕ ಸಂದೇಶ ಕಳುಹಿಸಿದ್ದೇನೆ ಎಂದು ಗೀರ್ಟ್ ವೈಲ್ಡರ್ಸ್ X ಖಾತೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಸಂಸತ್ತಿನ ಚುನಾವಣೆಯಲ್ಲಿ ಗೆಲವು ಸಾಧಿಸಿದ ವೈಲ್ಡರ್ಸ್ ನೂಪುರ್ ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟಾಪ್ 5 ಸಿಎಂಗಳ ಪೈಕಿ ಯೋಗಿ ಆದಿತ್ಯನಾಥ್‌ಗೆ 2 ನೇ ಸ್ಥಾನ- ಮೊದಲನೇಯವರು ಯಾರು?
Advertisement
ವೈಲ್ಡರ್ಸ್ ಎಕ್ಸ್ ಖಾತೆಯಲ್ಲಿ ಏನಿದೆ?
ಸತ್ಯವನ್ನು ಮಾತನಾಡಿದ್ದಕ್ಕಾಗಿ ಇಸ್ಲಾಮಿಸ್ಟ್‌ಗಳಿಂದ ಬೆದರಿಕೆ ಎದುರಿಸುತ್ತಿರುವ ಧೈರ್ಯಶಾಲಿ ನೂಪುರ್ ಶರ್ಮಾ ಅವರಿಗೆ ವೈಯಕ್ತಿಕವಾಗಿ ಬೆಂಬಲಿಸುವ ಸಂದೇಶ ಕಳುಹಿಸಿದ್ದೇನೆ. ಪ್ರಪಂಚದಾದ್ಯಂತ ಇರುವ ಸ್ವಾತಂತ್ರ್ಯ ಪ್ರೇಮಿಗಳು ಅವಳನ್ನು ಬೆಂಬಲಿಸಬೇಕು. ಭಾರತಕ್ಕೆ ಭೇಟಿ ನೀಡುವಾಗ ಒಂದು ದಿನ ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಗೀರ್ಟ್ ವೈಲ್ಡರ್ಸ್ ಬರೆದುಕೊಂಡಿದ್ದಾರೆ.
ಈ ಹಿಂದೆಯೂ ಹಾಡಿ ಹೊಗಳಿದ್ದ ವೈಲ್ಡರ್ಸ್:
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಈ ಹಿಂದೆಯೂ ವೈಲ್ಡರ್ಸ್ ಹೊಗಳಿದ್ದರು. ನೂಪುರ್ ಶರ್ಮಾ ಸತ್ಯವನ್ನು ಬಿಟ್ಟು ಬೇರೇನೂ ಮಾತನಾಡದ ವೀರ ಮಹಿಳೆ. ಇಡೀ ಜಗತ್ತು ಅವಳ ಬಗ್ಗೆ ಹೆಮ್ಮೆ ಪಡಬೇಕು. ಅವಳು ನೊಬೆಲ್ ಪ್ರಶಸ್ತಿಗೆ ಅರ್ಹಳು ಎಂದು ಹೇಳಿದ್ದರು. ಇದನ್ನೂ ಓದಿ: ಭಯೋತ್ಪಾದಕರಿಗೆ ಕಾಂಗ್ರೆಸ್ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮೋದಿ