ಚಿಕ್ಕಮಗಳೂರು: ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಗಾಳಿ, ನೀರು, ಬೆಂಕಿ ಪ್ರಕೃತಿ ಮುಂದೆ ಮನುಷ್ಯ ಸೊನ್ನೆಯೇ. ಚಿಕ್ಕಮಗಳೂರಿನಲ್ಲಿ ಈಗ 28-30 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಈ ಬಿಸಿಲಿಗೆ ಜನ ಬಸವಳಿದಿದ್ದಾರೆ.
ಬೀಸುತ್ತಿರುವ ಗಾಳಿ ಕೂಡ ಬೆಂಕಿಯನ್ನು ಉಗುಳುತ್ತಿದೆ. ಹೀಗಿರುವಾಗ ಕಾಫಿನಾಡ ರಣಬಿಸಿಲ ಮಧ್ಯೆಯೂ ನೋಡ ನೋಡ್ತಿದ್ದಂತೆ ಜಿಲ್ಲಾ ಆಟದ ಮೈದಾನದಲ್ಲಿ ಬಿಸಿದ ಬಿರುಗಾಳಿಗೆ ಧೂಳಿನ ಕಣ ಕೂಡ ಮೋಡಕ್ಕೆ ಮುತ್ತಿಕ್ಕಿ ಹೊರಟಂತೆ ಭಾಸವಾಗಿದೆ.
Advertisement
ಕ್ಷಣಾರ್ಧದಲ್ಲಿ ಬೀಸಿದ ಬಿರುಗಾಳಿ ಜನ ಅತ್ತ ದೃಷ್ಟಿ ಹಾಯುಸುವಷ್ಟರಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಈ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳಿಯರು ಪ್ರಕೃತಿಯಲ್ಲಿನ ಸತ್ಯ ಕಂಡು ಆಶ್ಚರ್ಯಕ್ಕೀಡಾಗಿದ್ದಾರೆ. ಅಲ್ಲದೆ ಈ ಘಳಿಗೆಯನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದ್ದಾರೆ.